45 ಗಂಟೆಗಳ ನಂತರ ಧರಣಿ ಕೊನೆಗೊಳಿಸಿದ ಮಮತಾ ಬ್ಯಾನರ್ಜಿ
Update: 2019-02-05 20:34 IST
ಕೊಲ್ಕತ್ತಾ, ಫೆ.5: ರಾಜ್ಯದ ಪೊಲೀಸ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಮುಂದಾದ ಸಿಬಿಐ ವಿರುದ್ಧ ನಡೆಸುತ್ತಿದ್ದ ಧರಣಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 45 ಗಂಟೆಗಳ ನಂತರ ಕೊನೆಗೊಳಿಸಿದ್ದಾರೆ.
“ಈ ಧರಣಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಜಯ. ಇಂದು ಇದನ್ನು ಮುಗಿಸುತ್ತಿದ್ದೇವೆ” ಎಂದು ಮಮತಾ ಹೇಳಿದರು.