ಅಣ್ಣಾ ಹಜಾರೆಯನ್ನು ಭೇಟಿಯಾದ ಫಡ್ನವೀಸ್: ಉಪವಾಸ ಮುಷ್ಕರ ಹಿಂದೆಗೆಯಲು ಆಗ್ರಹ

Update: 2019-02-05 15:05 GMT

ರಾಳೆಗಣಸಿದ್ಧಿ (ಮಹಾರಾಷ್ಟ್ರ), ಫೆ. 4: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಇಬ್ಬರು ಕೇಂದ್ರ ಸಚಿವರು ಮಂಗಳವಾರ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಉಪವಾಸ ಮುಷ್ಕರ ಹಿಂದೆ ತೆಗೆಯುವಂತೆ ಮನವಿ ಮಾಡಿದ್ದಾರೆ.

ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯದಲ್ಲಿ ಲೋಕಾಯುಕ್ತರ ನೇಮಕ ಮಾಡುವಂತೆ ಆಗ್ರಹಿಸಿ ಜನವರಿ 30ರಂದು ಹಜಾರೆ ಅವರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಅವರ ತೂಕ 4.30 ಇಳಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಣ್ಣಾ ಹಜಾರೆ ಅವರು ಹುಟ್ಟೂರಾದ ಅಹ್ಮದಾನಗರ್ ಜಿಲ್ಲೆಯ ರಾಳಾಗಣಸಿದ್ಧಿ ಗ್ರಾಮಕ್ಕೆ ಅಪರಾಹ್ನ ತಲುಪಿದೆ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ರಾಧಾ ಮೋಹನ್ ಸಿಂಗ್, ಸುಭಾಷ್ ಭಮ್ರೆ ಹಾಗೂ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಉಪಸ್ಥಿತರಿದ್ದರು.

ಉಪವಾಸ ಮುಷ್ಕರ ನಿಲ್ಲಿಸುವಂತೆ ಮುಖ್ಯಮಂತ್ರಿ ಫಡ್ನವೀಸ್ ಹಜಾರೆ ಅವರಲ್ಲಿ ಮನವಿ ಮಾಡಿದರು. ‘‘ಅಣ್ಣಾ ಅವರು ಲೋಕಪಾಲ್ ಹಾಗೂ ಲೋಕಾಯುಕ್ತವನ್ನು ನಿಯೋಜಿಸದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೆಲವು ನಿರ್ದಿಷ್ಟವಾದುದನ್ನು ಪ್ರಸ್ತಾಪಿಸಿದರೆ, ಆಗ ಮಾತ್ರ ಪರಿಹಾರದ ಬಗ್ಗೆ ಭರವೆ ಇರಬಹುದು.’’ ಎಂದು ಹಜಾರೆ ಅವರ ಸಹಾಯಕ ಹೇಳಿದ್ದಾರೆ. ಚುನಾವಣಾ ಸುಧಾರಣೆಯಲ್ಲದೆ ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ಸ್ವಾಮಿನಾಥನ್ ಆಯೋಗದ ಶಿಫಾರಸು ಅನುಷ್ಠಾನದ ಆಗ್ರಹವನ್ನು ಕೂಡ ಅವರು ಮಾಡಿದ್ದರು. ಹಜಾರೆ ಅವರ ಚಳವಳಿಗೆ ಬೆಂಬಲ ನೀಡಿ ಸ್ಥಳೀಯರು ಇತ್ತೀಚೆಗೆ ನಡೆಸಿದ ಬಂದ್ ಸಂದರ್ಭ ಮಂಗಳವಾರ ಸರಕಾರಿ ಅಧಿಕಾರಿಗಳು ಗ್ರಾಮ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.

ನರೇಂದ್ರ ಮೋದಿ ಸರಕಾರ ಭರವಸೆ ಈಡೇರಿಸದೇ ಇದ್ದರೆ ಪದ್ಮ ಭೂಷಣ ಪ್ರಶಸ್ತಿ ಹಿಂದಿರುಗಿಸಲಾಗುವುದು ಎಂದು ಅಣ್ಣಾ ಹಜಾರೆ ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News