ಮೆಹುಲ್ ಚೋಕ್ಸಿ ಈಗಲೂ ಭಾರತೀಯ ನಾಗರಿಕ: ಸರಕಾರ

Update: 2019-02-05 15:08 GMT

ಜಾಜ್‌ಟೌನ್, ಫೆ. 5: ಆ್ಯಂಟಿಗುವಾ ಹಾಗೂ ಬರ್ಬುಡಾ ಪಾಸ್‌ಪೋರ್ಟ್ ಹೊಂದಿರುವ ಹೊರತಾಗಿಯೂ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,000 ಕೋ. ವಂಚನೆ ಪ್ರಕರಣದ ಆರೋಪಿಯಾಗಿ ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಈಗಲೂ ಭಾರತದ ಪ್ರಜೆ. ಅವರ ಗಡಿಪಾರಿಗೆ ಸರಕಾರ ಪ್ರಯತ್ನಿಸುತ್ತಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ಹೆಸರು ಕೇಳಿ ಬರುವ ಮುನ್ನ ಅವರು ಭಾರತ ತ್ಯಜಿಸಿದ್ದರು. ಅವರ ಅಳಿಯ ವಜ್ರೋದ್ಯಮಿ ನೀರವ್ ಮೋದಿ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅವರು ಕೂಡ ದೇಶ ತ್ಯಜಿಸಿದ್ದಾರೆ. ಮೆಹುಲ್ ಚೋಕ್ಸಿ ಆ್ಯಂಟಿಗುವಾ ಹಾಗೂ ಬರ್ಬುಡಾದ ಪಾಸ್‌ಪೋರ್ಟ್ ಹೊಂದಿದ್ದಾರೆ. ಆದರೆ, ಚೋಕ್ಸಿ ಭಾರತೀಯ ಪ್ರಜೆ ಎಂದು ಭಾರತೀಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗುಯಾನದಲ್ಲಿರುವ ಭಾರತೀಯ ಹೈ ಕಮಿಷನರ್ ಹಾಗೂ ಆಟಿಗುವಾ, ಬರ್ಬುಡಾದಲ್ಲಿರುವ ಅನಿವಾಸಿ ಹೈಕಮಿಷನರ್ ವೆಂಕಟಾಚಾಲ ಮಹಾಲಿಂಗಮ್ ಕಳೆದ ವಾರ ಜಾರ್ಜ್ ಟೌನ್‌ನಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘‘ನಾವು ಅವರ ಭಾರತೀಯ ನಾಕರಿಕತ್ವವನ್ನು ನಿರಾಕರಿಸಿಲ್ಲ. ಅವರ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿದ್ದೇವೆ. ಆದರೆ, ಇದರ ಅರ್ಥ ನಾವು ಅವರ ನಾಗರಿಕತ್ವವನ್ನು ರದ್ದುಪಡಿಸದ್ದೇವೆ ಎಂದು ಅಲ್ಲ. ತಮ್ಮ ನಾಗರಿಕತ್ವವನ್ನು ರದ್ದುಗೊಳಿಸಬೇಕು ಎಂದು ಒಂದು ವೇಳೆ ಕೆಲವರು ಕೋರಿದರೆ ನಾವು ಒಪ್ಪಿಕೊಳ್ಳಬೇಕು. ಆದರೆ, ನಾವು ಒಪ್ಪಿಗೆ ನೀಡಿಲ್ಲ’’ ಎಂದು ಅವರು ಹೇಳಿದರು. ‘‘ನೀವು ಅಪರಾಧ ಎಸಗಿ ದೇಶದ ಪರಾರಿಯಾದ ಬಳಿ ನಿಮ್ಮ ನಾಗರಿತ್ವ ರದ್ದುಗೊಳ್ಳುತ್ತದೆ ಎಂದು ಭಾವಿಸುವುದು ತಪ್ಪು. ಅದು ನಿಜವಾಗಿಯೂ ಮೂರ್ಖತನ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News