ಕೇಂದ್ರ ಸಚಿವ ಅರುಣ್ ಜೇಟ್ಲಿ ಶೀಘ್ರ ಅಮೆರಿಕದಿಂದ ವಾಪಸಾಗುವ ಸಾಧ್ಯತೆ

Update: 2019-02-05 15:23 GMT

ಹೊಸದಿಲ್ಲಿ,ಫೆ.5: ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಈ ವಾರಾಂತ್ಯದಲ್ಲಿ ಸ್ವದೇಶಕ್ಕೆ ವಾಪಸಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಿತ್ತ ಖಾತೆಯನ್ನು ಹೊಂದಿದ್ದ ಜೇಟ್ಲಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೋದಿ ಸರಕಾರದ ಅಂತಿಮ ಮುಂಗಡಪತ್ರವನ್ನು ಮಂಡಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಅವರ ಖಾತೆಯನ್ನು ತಾತ್ಕಾಲಿಕವಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿದೆ.

ಆದರೂ,ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಜೇಟ್ಲಿ ವೀಡಿಯೊ ಕಾಲ್ ಮೂಲಕ ಸುದ್ದಿಗಾರರನ್ನೂ ಭೇಟಿಯಾಗಿದ್ದರು ಮತ್ತು ಬಜೆಟ್ ಕುರಿತು ಪ್ರಶ್ನೆಗಳನ್ನು ಎದುರಿಸಿದ್ದರು.

ಜೇಟ್ಲಿಯವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು,ವಾರಾಂತ್ಯದಲ್ಲಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಮತ್ತು ವೈದ್ಯರ ಸಲಹೆಯನ್ನು ಅವಲಂಬಿಸಿ ಮುಂದಿನ ವಾರ ಸಂಸತ್ತಿಗೆ ಹಾಜರಾಗಲೂಬಹುದು ಎಂದು ಮೂಲಗಳು ತಿಳಿಸಿದವು.

ಭಾರತಕ್ಕೆ ಮರಳಿದ ತಕ್ಷಣ ಅವರು ವಿತ್ತ ಖಾತೆಗೆ ಮರುನೇಮಕಗೊಳ್ಳಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News