ಹಾಲಿವುಡ್ ಗೆ ಹಾರಲಿದ್ದಾರೆ ಈ ಅದ್ಭುತ ಭಾರತೀಯ ನಟ

Update: 2019-02-08 10:41 GMT

ಹೊಸದಿಲ್ಲಿ, ಫೆ.8: ಈಗಾಗಲೇ ಹಲವು ಪ್ರತಿಭಾವಂತ ಭಾರತೀಯ ನಟರು ಹಾಲಿವುಡ್ ಗೆ ಪ್ರವೇಶಿಸಿದ್ದಾರೆ. ಇದೀಗ ಈ ಸಾಲಿನಲ್ಲಿ ಪಂಕಜ್ ತ್ರಿಪಾಠಿಯೂ ಸೇರಿದ್ದಾರೆ. ಪಂಕಜ್ ತ್ರಿಪಾಠಿ ಬಾಲಿವುಡ್ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಅವರ ನಟನಾ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದರು.

ಪಂಕಜ್ ತ್ರಿಪಾಠಿಯವರ ಹಾಲಿವುಡ್ ಚಿತ್ರವನ್ನು ಸ್ಯಾಮ್ ಹಾರ್ಗ್ರೇವ್ ನಿರ್ದೇಶಿಸಲಿದ್ದಾರೆ. ಇವರು ‘ಅವೆಂಜರ್ಸ್ ಇನ್ಫಿನಿಟಿ ವಾರ್’ ಮತ್ತು ‘ಅಟೋಮಿಕ್ ಬ್ಲಾಂಡ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.

ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಅವೆಂಜರ್ಸ್ ಚಿತ್ರದ ಥೋರ್ ಖ್ಯಾತಿಯ ಕ್ರಿಸ್ ಹೆಮ್ಸ್ ವರ್ತ್ ಜೊತೆ ನಟಿಸಿದ್ದಾರೆ ಎನ್ನವುದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News