ಕುಲ್ಗಾಮ್ ಹಿಮಪಾತ: ಇನ್ನೋರ್ವ ಪೊಲೀಸ್ ಸಿಬ್ಬಂದಿ ಸಾವು,ಮೃತರ ಸಂಖ್ಯೆ ಎಂಟಕ್ಕೇರಿಕೆ
Update: 2019-02-09 20:06 IST
ಶ್ರೀನಗರ,ಫೆ.9: ಎರಡು ದಿನಗಳ ಹಿಂದೆ ಕುಲ್ಗಾಮ್ ಜಿಲ್ಲೆಯ ಜವಾಹರ ಸುರಂಗದ ಬಳಿ ಸಂಭವಿಸಿದ್ದ ಹಿಮಪಾತದ ಬಳಿಕ ನಾಪತ್ತೆಯಾಗಿದ್ದ ಪೊಲೀಸ್ ಸಿಬ್ಬಂದಿಯೋರ್ವನ ಶವವನ್ನು ಶೋಧ ಮತ್ತು ರಕ್ಷಣಾ ತಂಡವು ಶನಿವಾರ ಬೆಳಿಗ್ಗೆ ಪತ್ತೆ ಹಚ್ಚಿದ್ದು,ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದೆ.
ಸುರಂಗದ ಉತ್ತರ ಸುದಿಯಲ್ಲಿನ ಪೊಲೀಸ್ ಚೌಕಿಯು ಗುರುವಾರ ಸಂಜೆ ಹಿಮಪಾತಕ್ಕೆ ಸಿಲುಕಿದ್ದು, 10 ಸಿಬ್ಬಂದಿಗಳು ಸುರಕ್ಷಿತವಾಗಿ ಪಾರಾಗಿದ್ದರೆ,ಇತರ 10 ಜನರು ಹಿಮದಡಿ ಸಿಲುಕಿದ್ದರು. ಐವರು ಪೊಲೀಸರು ಮತ್ತು ಇಬ್ಬರು ಕೈದಿಗಳ ಶವಗಳು ಶುಕ್ರವಾರ ಪತ್ತೆಯಾಗಿದ್ದವು. ಇಬ್ಬರು ಪೊಲೀಸರನ್ನು ರಕ್ಸಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದ.