ಮೋದಿ ಪಾಕಿಸ್ತಾನದ ಪ್ರಧಾನಿಯಂತೆ ಕಾಣುತ್ತಾರೆ: ಕೇಜ್ರಿವಾಲ್

Update: 2019-02-11 16:51 GMT

ಹೊಸದಿಲ್ಲಿ, ಫೆ. 11: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್, ರಾಜ್ಯ ಸರಕಾರವನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಅವರು ಪಾಕಿಸ್ತಾನದ ಪ್ರಧಾನಿಯಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ಕೋಲ್ಕತಾ ಪೊಲೀಸ್ ವರಿಷ್ಠ ರಾಜೀವ್ ಕುಮಾರ್ ಅವರ ನಿವಾಸಕ್ಕೆ ತೆರಳಿದ ಕುರಿತಂತೆ ಕೇಂದ್ರ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಬಿಕ್ಕಟ್ಟನ್ನು ಅವರು ಉಲ್ಲೇಖಿಸಿದರು. ‘‘ಅವರು ಬಿಜೆಪಿಯ ಪ್ರಧಾನಿ ಮಾತ್ರ ಅಲ್ಲ. ಭಾರತದ ಪ್ರಧಾನಿ ಎಂದು ನಾನು ಮೋದಿ ಅವರಿಗೆ ಹೇಳಲು ಬಯಸುತ್ತೇನೆ. ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರಗಳನ್ನು ಅವರು ನೋಡಿಕೊಳ್ಳುತ್ತಿರುವ ರೀತಿ ಅವರು ಪಾಕಿಸ್ತಾನದ ಪ್ರಧಾನಿ ಎಂಬಂತೆ ಕಾಣುತ್ತಿದೆ.’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘‘ರಾಜ್ಯದ ಪೊಲೀಸರು ಹಾಗೂ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಬದ್ದವಾಗಿರಬಾರದು. ಬದಲಾಗಿ ಕೇಂದ್ರ ಸರಕಾರಕ್ಕೆ ಬದ್ಧವಾಗಿರಬೇಕು ಎಂಬ ಸಂದೇಶ ರವಾನಿಸಲು ಅವರು ಈಗ ಕೋಲ್ಕತಾ ಪೊಲೀಸ್ ಆಯುಕ್ತರನ್ನು ಬಂದಿಸಲು 40 ಸಿಬಿಐ ಅಧಿಕಾರಿಗಳನ್ನು ಕಳುಹಿಸಿದ್ದಾರೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News