ಕೇಂದ್ರದ ನೀತಿಗೆ ವಿರೋಧ: 'ಭಾರತ ರತ್ನ' ಪ್ರಶಸ್ತಿ ನಿರಾಕರಿಸಿದ ಭೂಪೇನ್ ಹಝಾರಿಕಾ ಕುಟುಂಬ

Update: 2019-02-11 18:07 GMT

ಹೊಸದಿಲ್ಲಿ,ಫೆ.11:ಖ್ಯಾತ ಅಸ್ಸಾಮಿ ಗಾಯಕ ಭೂಪೇನ್ ಹಝಾರಿಕಾ ಅವರಿಗೆ ಈ ವರ್ಷ ಮೋದಿ ಸರಕಾರವು ಘೋಷಿಸಿರುವ ‘ಭಾರತ ರತ್ನ’ ಪ್ರಶಸ್ತಿಯನ್ನು ಪೌರತ್ವ ಮಸೂದೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತಿರಸ್ಕರಿಸಲು ಅವರ ಕುಟುಂಬವು ನಿರ್ಧರಿಸಿದೆ.

ಈ ವರ್ಷದ ಗಣತಂತ್ರ ದಿನದಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಸಾಮಾಜಿಕ ಕಾರ್ಯಕರ್ತ ದಿ.ನಾನಾಜಿ ದೇಶಮುಖ ಅವರೊಂದಿಗೆ ಹಝಾರಿಕಾ ಅವರಿಗೆ ಮರಣೋತ್ತರವಾಗಿ ಈ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ಆದರೆ ಪ್ರಶಸ್ತಿಯನ್ನು ತಿರಸ್ಕರಿಸುವ ವಿಷಯದಲ್ಲಿ ಹಝಾರಿಕಾ ಕುಟುಂಬ ಸದಸ್ಯರ ನಡುವೆ ಒಮ್ಮತದ ಕೊರತೆಯಿದೆ. ಅಮೆರಿಕದಲ್ಲಿ ವಾಸವಾಗಿರುವ ಹಝಾರಿಕಾರ ಪುತ್ರ ತೇಜ್ ಹಝಾರಿಕಾ ಅವರು ಪೌರತ್ವ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಪ್ರಶಸ್ತಿಯನ್ನು ತಿರಸ್ಕರಿಸುವಂತಹ ಪ್ರಮುಖ ನಿರ್ಧಾರವನ್ನು ಒಬ್ಬನೇ ವ್ಯಕ್ತಿಯು ತೆಗೆದುಕೊಳ್ಳುವಂತಿಲ್ಲ ಎಂದು ಹಝಾರಿಕಾರ ಸೋದರ ಸಮರ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಖ್ಯಾತ ಮಣಿಪುರಿ ಚಿತ್ರ ನಿರ್ದೇಶಕ ಅರಿಬಮ್ ಶ್ಯಾಮಶರಣ ಅವರು ಪೌರತ್ವ ಮಸೂದೆಯನ್ನು ವಿರೋಧಿಸಿ 2006ರಲ್ಲಿ ತನಗೆ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News