ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ಜಾರ್ಖಂಡ್ ಸರಕಾರ

Update: 2019-02-12 17:35 GMT

ರಾಂಚಿ,ಫೆ.12: ಐಸಿಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಜಾರ್ಖಂಡ್ ಸರಕಾರವು ಮಂಗಳವಾರ ಆದೇಶಿಸಿದೆ. ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆ,1908ರ ಕಲಂ 16ರಡಿ ಈ ನಿಷೇಧವನ್ನು ಹೇರಲಾಗಿದೆ.

ಜಾರ್ಖಂಡ್ ಸರಕಾರವು ರಾಜ್ಯದಲ್ಲಿ ಪಿಎಫ್‌ಐ ಅನ್ನು ನಿಷೇಧಿಸಿರುವುದು ಇದು ಪ್ರಥಮವಲ್ಲ. ಕಳೆದ ವರ್ಷದ ಫೆ.20ರಂದು ಪಿಎಫ್‌ಐ ಸದಸ್ಯರು ಐಸಿಸ್‌ನ ಪ್ರಭಾವಕ್ಕೊಳಗಾಗಿದ್ದಾರೆಂಬ ಕಾರಣದಿಂದ ಅದನ್ನು ನಿಷೇಧಿಸಲಾಗಿತ್ತು.

ಪಾಕೂರ್ ಜಿಲ್ಲೆಯಲ್ಲಿ ಪಿಎಫ್‌ಐ ತುಂಬ ಸಕ್ರಿಯವಾಗಿದೆ. ಕೇರಳ ಮೂಲದ ಪಿಎಫ್‌ಐ ಸದಸ್ಯರು ಐಸಿಸ್‌ನಿಂದ ಪ್ರಭಾವಿತರಾಗಿದ್ದಾರೆ. ಗೃಹಸಚಿವಾಲಯದ ವರದಿಯಂತೆ ಕೆಲವು ದಕ್ಷಿಣದ ರಾಜ್ಯಗಳಿಂದ ಪಿಎಫ್‌ಐ ಸದಸ್ಯರು ಸಿರಿಯಾಕ್ಕೂ ತೆರಳಿ ಐಸಿಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಸರಕಾರವು ಆಗ ಹೇಳಿತ್ತು. ಆದರೆ 2018,ಆಗಸ್ಟ್‌ನಲ್ಲಿ ಉಚ್ಚ ನ್ಯಾಯಾಲಯವು ನಿಷೇಧವನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News