ಗುಜ್ಜರರು, ಇತರ ಜಾತಿಗಳಿಗೆ ಶೇ. 5 ಮೀಸಲಾತಿ: ರಾಜಸ್ಥಾನ ವಿಧಾನ ಸಭೆಯಲ್ಲಿ ಮಸೂದೆ ಮಂಡನೆ

Update: 2019-02-13 15:47 GMT

ಜೈಪುರ, ಫೆ. 13: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಗುಜ್ಜರರು ಹಾಗೂ ಇತರ ಸಮುದಾಯಗಳಿಗೆ ಶೇ. 5 ಮೀಸಲಾತಿ ನೀಡುವ ಮಸೂದೆಯನ್ನು ರಾಜಸ್ಥಾನ ಸರಕಾರ ಬುಧವಾರ ವಿಧಾನ ಸಭೆಯಲ್ಲಿ ಮಂಡಿಸಿತು. ಗುಜ್ಜರರು ಹಾಗೂ ಇತರ ಜಾತಿಗಳಿಗೆ ಮೀಸಲಾತಿ ನೀಡಲು ರಾಜಸ್ಥಾನ ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆ (ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಸರಕಾರದ ಸೇವೆಗಳ ಹುದ್ದೆಗಳಿಗೆ ನಿಯೋಜನೆಯಲ್ಲಿ ಮೀಸಲಾತಿ) 2019ನ್ನು ರಾಜಸ್ಥಾನ ಸರಕಾರ ಮಂಡಿಸಿತು.

ಮೀಸಲಾತಿಗೆ ಆಗ್ರಹಿಸಿ ಕಳೆದ ಶುಕ್ರವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಗುಜ್ಜರರ ಸಮುದಾಯದ ಸದಸ್ಯರನ್ನು ಶಮನಗೊಳಿಸಲು ಇಂದನ ಸಚಿವ ಬಿ.ಡಿ. ಕಲ್ಲಾ ರಾಜಸ್ಥಾನ ವಿಧಾನ ಸಭೆಯಲ್ಲಿ ಮಸೂದೆ ಮಂಡಿಸಿದರು. ಗುಜ್ಜರರು, ಬಂಜಾರರು, ಗಾಡಿಯಾ ಲೋಹಾರರು, ರೈಕಾಗಳು ಹಾಗೂ ಗಡರಿಯಾಗಳಿಗೆ ಶೇ. 5 ಮೀಸಲಾತಿಯೊಂದಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶೇ. 21ರಿಂದ ಶೇ. 26ಕ್ಕೆ ಏರಿಸುವಂತೆ ಮಸೂದೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News