ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನೆ ಉಗ್ರರಿಗೆ ನೀಡಿದ ಪ್ರತ್ಯುತ್ತರ: ಕೇಂದ್ರ ಸಚಿವ ಗೋಯಲ್

Update: 2019-02-15 11:22 GMT

ಹೊಸದಿಲ್ಲಿ, ಫೆ.15: ನಿಗದಿಯಂತೆ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿರುವುದು ಜಮ್ಮು ಮತ್ತು ಕಾಶ್ಮೀರದ ಪುಲ್ವಾನಾದಲ್ಲಿ ಉಗ್ರರು ಸೈನಿಕರ ಮೇಲೆ ನಡೆಸಿದ ದಾಳಿಗೆ ಸೂಕ್ತ ಪ್ರತ್ಯುತ್ತರ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

ಈ ಅರೆ ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

"ಮುಂಬೈ ಅವರಿಗೆ ಉತ್ತರ ನೀಡಿದ ವಿಧಾನವೆಂದರೆ, ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಂತೆಯೇ ಇಂದು ದೇಶದ ಜನತೆಯ ಸೇವೆಗೆ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಸಮರ್ಪಣೆ ಮಾಡಲಾಗಿದೆ. ಇದು ಉಗ್ರರಿಗೆ ನೋಡಿದ ಅತಿದೊಡ್ಡ ಉತ್ತರ. ನಮ್ಮ ಜನರಾಗಲೀ, ಜವಾನರಾಗಲೀ ಅವರಿಗೆ ಮಣಿಯುವ ಪ್ರಶ್ನೆಯೇ ಇಲ್ಲ" ಎಂದು ಗೋಯಲ್ ಉದ್ಘಾಟನೆ ಬಳಿಕ ದೆಹಲಿಯಿಂದ ವಾರಣಾಸಿಗೆ ತೆರಳಿದ ರೈಲಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು. ಉಗ್ರರಿಗೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯ ದೇಶಕ್ಕೆ ಹಾಗೂ ಸೈನಿಕರಿಗೆ ಇದೆ” ಎಂದು ಅಭಿಪ್ರಾಯಪಟ್ಟರು.

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಮೋದಿ ಹಮ್ಮಿಕೊಂಡಿದ್ದ ಎಲ್ಲ ಪ್ರಚಾರ ಕಾರ್ಯಗಳನ್ನು ಮುಂದೂಡಲಾಗಿದೆ. ಇದಕ್ಕೂ ಮುನ್ನ ಅವರು ಹಿರಿಯ ಸಂಪುಟ ಸಹೋದ್ಯೋಗಿಗಳ ಜತೆಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು.

ಪ್ರಧಾನಿ ‘ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲಿಗೆ ಚಾಲನೆ ನೀಡಿರುವ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ನಾಯಕಿ ಅಲ್ಕಾ ಲಂಬಾ ಕಟುವಾಗಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News