ಮೊಹಾಲಿ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟಿಗರ ಫೋಟೊಗೆ ಕೊಕ್

Update: 2019-02-17 18:31 GMT

ಚಂಡಿಗಡ, ಫೆ.17: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೈತಿಕವಾಗಿ ಬೆನ್ನೆಲುಬಾಗಿ ನಿಲ್ಲಲು ಯೋಚಿಸಿರುವ ಪಂಜಾಬ್ ಕ್ರಿಕೆಟ್ ಸಂಸ್ಥೆಯು(ಪಿಸಿಎ) ‘‘ವಿನೀತ ನಡೆ’’ಯಾಗಿ ಮೊಹಾಲಿ ಕ್ರೀಡಾಂಗಣದ ವಿವಿಧ ಸ್ಥಳಗಳಲ್ಲಿರುವ ಪಾಕಿಸ್ತಾನ ಕ್ರಿಕೆಟಿಗರ ಭಾವಚಿತ್ರಗಳನ್ನು ತೆಗೆದುಹಾಕಿದೆ.

ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಪಿಸಿಎ ಖಜಾಂಚಿ ಅಜಯ್ ತ್ಯಾಗಿ ಹೇಳಿದ್ದಾರೆ.

‘‘ಒಂದು ವಿನೀತ ನಡೆಯಾಗಿ ಪಿಸಿಎ ಹುತಾತ್ಮ ಯೋಧರ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಲ್ಲಲು ಈ ನಿರ್ಣಯ ತೆಗೆದುಕೊಂಡಿದೆ. ಪುಲ್ವಾಮ ದಾಳಿಯ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿದ್ದು ಪಿಸಿಎ ಕೂಡ ಇದಕ್ಕೆ ಹೊರತಾಗಿಲ್ಲ. ಗ್ಯಾಲರಿ, ಲಾಂಗ್‌ರೂಮ್, ಸ್ವಾಗತಭವನ ಮತ್ತು ‘ಹಾಲ್ ಆಫ್ ಫೇಮ್’ ಪ್ರದೇಶ ಸೇರಿದಂತೆ ಕ್ರೀಡಾಂಗಣದ ವಿವಿಧ ಭಾಗಗಳಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಸುಮಾರು 15 ಫೋಟೊಗಳಿವೆ ಎಂದು ತ್ಯಾಗಿ ಹೇಳಿದ್ದಾರೆ.

ಕ್ರೀಡಾಂಗಣದಿಂದ ತೆಗೆದುಹಾಕಲಾದ ಪಾಕ್ ಕ್ರಿಕೆಟಿಗರ ಫೋಟೊಗಳಲ್ಲಿ ಈಗಿನ ಪಾಕ್ ಅಧ್ಯಕ್ಷ ಇಮ್ರಾನ್‌ಖಾನ್ ಅವರ ಫೋಟೊವೂ ಸೇರಿದೆ. ಶಾಹಿದ್ ಆಫ್ರಿದಿ, ಜಾವೆದ್ ಮಿಯಾಂದಾದ್ ಹಾಗೂ ವಸೀಂ ಅಕ್ರಂ ಈ ಕ್ರಿಕೆಟಿಗರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News