ಜೈಶ್ ಮುಹಮ್ಮದ್ ನಂಟು ಆರೋಪ: 23 ಮಂದಿಯ ಬಂಧನ

Update: 2019-02-18 19:17 GMT

ಜಮ್ಮುಕಾಶ್ಮೀರ, ಫೆ. 18: ಪಾಕಿಸ್ತಾನ ಮೂಲದ ಜೈಶ್  ಮುಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಭದ್ರತಾ ಪಡೆ ಜಮ್ಮು ಕಾಶ್ಮೀರದಲ್ಲಿ 23 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ. ಬಂಧಿತರು ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯ ಹೊಣೆ ಹೊತ್ತ ಜೈಶ್ ಮುಹಮ್ಮದ್ ಸಂಘಟನೆಯ ಸದಸ್ಯರು ಹಾಗೂ ಅನುಕಂಪ ಹೊಂದಿರುವವರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೋಕಪೋರಾ ಗ್ರಾಮದ ನಿವಾಸಿಯಾಗಿರುವ ಜೈಶ್ ಮುಹಮ್ಮದ್ ಸಂಘಟನೆಯ ಉಗ್ರ ಆದಿಲ್ ಅಹ್ಮದ್ ದಾರ್ ನಡೆಸಿದ ಆತ್ಮಾಹುತಿ ದಾಳಿಗೆ ಸಂಬಂಧಿಸಿ ಶಂಕಿತರನ್ನು ಎನ್‌ಐಎ ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಬಂಧಿತರು ಜೈಶ್ ಮುಹಮ್ಮದ್‌ನ ಕಾಶ್ಮೀರ ಮುಖ್ಯಸ್ಥ ಸಹಿತ ಟಾಪ್ ಕಮಾಂಡರ್‌ಗಳನ್ನು ತಲುಪಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News