‘ನೋಟ್ ಬುಕ್’ ಸಿನೆಮಾದ ಆತಿಫ್ ಅಸ್ಲಂ ಹಾಡಿಗೆ ಕೊಕ್ ನೀಡಿದ ಸಲ್ಮಾನ್‍ ಖಾನ್

Update: 2019-02-19 09:21 GMT

ಹೊಸದಿಲ್ಲಿ, ಫೆ.19: ಖ್ಯಾತ ಬಾಲಿವುಡ್ ನಟ ಸಲ್ಮಾನ್‍ ಖಾನ್ ಅವರು ತಮ್ಮ ನೋಟ್‍ ಬುಕ್ ಸಿನಿಮಾದಿಂದ ಆತಿಫ್ ಅಸ್ಲಮ್ ಹಾಡಿದ ಹಾಡನ್ನು ತೆಗೆದಿದ್ದಾರೆ ಎಂದು ವರದಿಯಾಗಿವೆ.

ಆತಿಫ್ ಅಸ್ಲಂ ಹಾಡಿನ ಬದಲು ಬೇರೆ ಹಾಡನ್ನು ಸೇರಿಸುವಂತೆ ತಮ್ಮ ನಿರ್ಮಾಣ ಸಂಸ್ಥೆ, ಸಲ್ಮಾನ್ ಖಾನ್ ಫಿಲಂಸ್‍ ಗೆ ಸಲ್ಮಾನ್ ಸೂಚನೆ ನೀಡಿದ್ದಾರೆ ಎಂದು ಪಿಂಕ್‍ ವಿಲ್ಲಾ ವರದಿ ಮಾಡಿದೆ.

ಪುಲ್ವಾಮಾ ದಾಳಿ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ನೋಟ್‍ ಬುಕ್ ಚಿತ್ರಕ್ಕೆ ಇನ್ನೂ ಯಾವ ಹೊಸ ಗಾಯಕರನ್ನೂ ಆಯ್ಕೆ ಮಾಡಿಲ್ಲ ಎನ್ನಲಾಗಿದೆ. ಅಸ್ಲಂ ಹಾಡಿನ ಟ್ರ್ಯಾಕನ್ನು ಕೆಲವೇ ದಿನಗಳಲ್ಲಿ ಮರು ಧ್ವನಿಮುದ್ರಣಗೊಳಿಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಪಿಂಕ್‍ ವಿಲ್ಲಾ ವರದಿ ಹೇಳಿದೆ.

ಸಲ್ಮಾನ್ ಖಾನ್ ಫಿಲಂ ನಿರ್ಮಾಣ ಸಂಸ್ಥೆಯ ಈ ಚಿತ್ರದಲ್ಲಿ ಮೊನಿಶ್‍ ಭಾಲ್ ಪುತ್ರಿ ಪ್ರನೂತನ್ ಹಾಗೂ ಹೊಸ ಪ್ರತಿಭೆ ಝಹೀರ್ ಇಕ್ಬಾಲ್ ಅಭಿನಯಿಸಿದ್ದಾರೆ. ಚಿತ್ರ ನಿರ್ಮಾಪಕರ ಹೇಳಿಕೆಯ ಪ್ರಕಾರ, ನೋಟ್‍ ಬುಕ್ ತಂಡದ ಗಳಿಕೆಯಲ್ಲಿ 22 ಲಕ್ಷ ರೂಪಾಯಿಗಳನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News