ಜೈಪುರ ಜೈಲಿನಲ್ಲಿ ಪಾಕಿಸ್ತಾನಿ ಕೈದಿಯ ಥಳಿಸಿ ಹತ್ಯೆ

Update: 2019-02-20 14:54 GMT

ಜೈಪುರ,ಫೆ.20: ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪಾಕಿಸ್ತಾನಿ ಕೈದಿಯೋರ್ವನನ್ನು ಸಹಕೈದಿಗಳು ಹತ್ಯೆಗೈದಿರುವ ಘಟನೆ ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಸಂಭವಿಸಿದೆ.

 ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಆರು ದಿನಗಳ ಬಳಿಕ ಈ ಘಟನೆ ನಡೆದಿದೆ.

ಕೊಲೆಯಾಗಿರುವ ಪಾಕ್ ಕೈದಿಯನ್ನು ಶಕೀರುಲ್ಲಾ ಎಂದು ಗುರುತಿಸಲಾಗಿದೆ. ಜೈಲಿನಲ್ಲಿಯ ಇತರ ಕೈದಿಗಳು ಆತನನ್ನು ಥಳಿಸಿ ಸಾಯಿಸಿದ್ದು,ಹಿರಿಯ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದವು.

ಕೊಲೆಯಲ್ಲಿ ಮೂವರು ಭಾರತೀಯ ಕೈದಿಗಳು ಭಾಗಿಯಾಗಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News