ಬ್ರೆಕ್ಸಿಟ್ ಬಳಿಕ ಬ್ರಿಟನ್‌ನ ಜಾಗತಿಕ ಸ್ಥಾನಮಾನದಲ್ಲಿ ಕುಸಿತ: ಅಧ್ಯಯನ

Update: 2019-02-20 18:00 GMT

ಲಂಡನ್, ಫೆ. 20: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯಿಂದ ಬ್ರಿಟನ್‌ನ ಜಾಗತಿಕ ಸ್ಥಾನಮಾನ ಕುಸಿದಿದೆ ಎಂದು ಮಂಗಳವಾರ ಬಿಡುಗಡೆ ಮಾಡಲಾದ ನೂತನ ಅಧ್ಯಯನವೊಂದು ಹೇಳಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ನ್ಯಾಯಾಧೀಶರ ಹುದ್ದೆಗಾಗಿ 2017 ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಭಾರತದ ಅಭ್ಯರ್ಥಿಯ ವಿರುದ್ಧ ಬ್ರಿಟನ್ ಅಭ್ಯರ್ಥಿ ಪರಾಭವಗೊಂಡಿರುವುದು ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದು ‘ಗ್ಲೋಬಲ್ ಬ್ರಿಟನ್ ಇನ್ ದ ಯುನೈಟೆಡ್ ನೇಶನ್ಸ್’ ಎಂಬ ತಲೆಬರಹದ ಅಧ್ಯಯನ ತಿಳಿಸಿದೆ.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್ ಹೊಂದಿರುವ ಖಾಯಂ ಸದಸ್ಯತ್ವದ ಋಜುತ್ವದ ಬಗ್ಗೆಯೂ ಬ್ರೆಕ್ಸಿಟ್ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಜೆಸ್ ಗಿಫ್ಕಿನ್ಸ್, ಸಾಮುಯೆಲ್ ಜರ್ವಿಸ್ ಮತ್ತು ಜಾಸನ್ ರಾಲ್ಫ್ ನಡೆಸಿರುವ ಅಧ್ಯಯನವು ತಿಳಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನಡೆದ ಚುನಾವಣೆಯಲ್ಲಿ ಭಾರತದ ದಲ್ವೀರ್ ಭಂಡಾರಿ ಬ್ರಿಟನ್‌ನ ಕ್ರಿಸ್ಟೋಫರ್ ಗ್ರೀನ್‌ವುಡ್‌ರನ್ನು ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News