‘ಬ್ರೆಕ್ಸಿಟ್’ಗೆ ಬೇಸತ್ತು ತೆರೇಸಾ ಪಕ್ಷ 3 ಸಂಸದರ ರಾಜೀನಾಮೆ

Update: 2019-02-20 18:12 GMT

ಲಂಡನ್, ಫೆ. 20: ಬ್ರಿಟನ್ ಪ್ರಧಾನಿ ತೆರೇಸಾ ಮೇ ಸರಕಾರವು ‘ಬ್ರೆಕ್ಸಿಟ್’ನ್ನು ನಿಭಾಯಿಸಿದ ರೀತಿಗೆ ಬೇಸತ್ತು, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಮೂವರು ಸಂಸದರು ಬುಧವಾರ ರಾಜೀನಾಮೆ ನೀಡಿದ್ದಾರೆ.

ಈ ಸಂಸದರು ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಇರುವುದಕ್ಕೆ ಪರವಾಗಿದ್ದರು. ಇದು ಐರೋಪ್ಯ ಒಕ್ಕೂಟದಿಂದ ಹೊರಬರುವುದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಪಕ್ಷದಲ್ಲಿ ಏಕತೆಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದ ತೆರೇಸಾ ಮೇಯ ಪ್ರಯತ್ನಗಳಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಈ ಸಂಸದರು, ಐರೋಪ್ಯ ಒಕ್ಕೂಟದಿಂದ ಹೊರಬರುವ ಮೇಯ ಬ್ರೆಕ್ಸಿಟ್ ತಂತ್ರಗಾರಿಕೆಗಳ ಟೀಕಾಕಾರರಾಗಿದ್ದರು.

ಈಗಾಗಲೇ ಪ್ರತಿಪಕ್ಷ ಲೇಬರ್ ಪಕ್ಷದಿಂದ ಹೊರಹೋಗಿರುವ ಏಳು ಸಂಸದರು ಸಂಸತ್ತಿನಲ್ಲಿ ಸ್ಥಾಪಿಸಿರುವ ನೂತನ ಗುಂಪನ್ನು ಸೇರುವುದಾಗಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News