ಟಿಬೆಟ್‌ಗೆ ಎಪ್ರಿಲ್ 1ರವರೆಗೆ ವಿದೇಶಿಯರಿಗೆ ಪ್ರವೇಶವಿಲ್ಲ

Update: 2019-02-20 18:13 GMT

ಬೀಜಿಂಗ್, ಫೆ. 20: ಎಪ್ರಿಲ್ 1ರವರೆಗೆ ವಿದೇಶಿ ಪ್ರವಾಸಿಗರಿಗೆ ಟಿಬೆಟ್ ಭೇಟಿಗೆ ಅವಕಾಶವಿಲ್ಲ ಎಂದು ಮಾನವಹಕ್ಕು ಗುಂಪುಗಳು ಮತ್ತು ಪ್ರವಾಸ ಸಂಘಟಕರು ಹೇಳಿದ್ದಾರೆ.

1959ರಲ್ಲಿ ಟಿಬೆಟ್‌ನಲ್ಲಿ ಚೀನಾ ವಿರುದ್ಧ ನಡೆದ ವಿಫಲ ಬಂಡಾಯದ 60ನೇ ವಾರ್ಷಿಕ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸರಕಾರವು ಭದ್ರತೆಯನ್ನು ಬಿಗಿಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಬಂಡಾಯದ ವಾರ್ಷಿಕ ದಿನಾಚರಣೆ ಮಾರ್ಚ್ 10ರಂದು ನಡೆಯಲಿದೆ.

ವಿದೇಶಿಯರಿಗೆ ಟಿಬೆಟನ್ನು ಮುಚ್ಚಿರುವ ಬಗ್ಗೆ ಸರಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಾಮಾನ್ಯ ದಿನಗಳಲ್ಲಿಯೂ ಟಿಬೆಟ್‌ಗೆ ಪ್ರವಾಸ ಕೈಗೊಳ್ಳುವುದು ಸುಲಭವಿಲ್ಲ. ಪ್ರವಾಸಿಗರು ವಿಶೇಷ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ರಾಜತಾಂತ್ರಿಕರು ಮತ್ತು ವಿದೇಶಿ ಪತ್ರಕರ್ತರು ಟಿಬೆಟ್‌ಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News