ಮ್ಯಾಡ್ರಿಡ್ ಓಪನ್‌ಗೆ ಮರಳಲಿರುವ ಫೆಡರರ್

Update: 2019-02-21 04:52 GMT

ಝ್ಯುರಿಚ್, ಫೆ.20: ಈ ಋತುವಿನ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪರ್ಧಿಸುವುದಾಗಿ ಖ್ಯಾತ ಆಟಗಾರ ಸ್ವಿಟ್ಝರ್ಲೆಂಡ್‌ನ ರೋಜರ್ ಫೆಡರರ್ ಹೇಳಿದ್ದಾರೆ. ಆ ಮೂಲಕ ಎರಡು ವರ್ಷಗಳ ಬಳಿಕ ಯುರೋಪಿನ ಆವೆ ಮಣ್ಣಿನ ಅಂಕಣಕ್ಕೆ ಮರಳುವುದನ್ನು ದೃಢಪಡಿಸಿದ್ದಾರೆ.

ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನ 16ನೇ ಸುತ್ತಿನ ಪಂದ್ಯದಲ್ಲಿ ಗ್ರೀಕ್‌ನ ಸಿತ್ಸಿಪಾಸ್‌ಗೆ ಸೋತಿದ್ದ ಫೆಡರರ್ ಆ ಬಳಿಕ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿಲ್ಲ.

2009ರಲ್ಲಿ ಫ್ರೆಂಚ್ ಓಪನ್ ಗೆದ್ದ ಬಳಿಕ ತಮ್ಮ ಇತರ ಟೂರ್ನಿಗಳಲ್ಲಿ ಭಾಗವಹಿಸುವುದಕ್ಕಾಗಿ ಯುರೋಪಿಯನ್ ಕ್ಲೇ ಕೋರ್ಟ್ ಋತುಗಳನ್ನು ಅವರು ತಪ್ಪಿಸಿಕೊಳ್ಳಲು ಆದ್ಯತೆ ನೀಡಿದ್ದರು. ‘ಸಾಜಾ ಮ್ಯಾಜಿಕಾ’ ಟೆನಿಸ್ ಕೇಂದ್ರದಲ್ಲಿ (ಮ್ಯಾಡ್ರಿಡ್ ಓಪನ್) 2006, 2009 ಹಾಗೂ 2012ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 37 ವರ್ಷದ ಸ್ವಿಸ್ ಆಟಗಾರ ಫೆಡರರ್, ರಫೆಲ್ ನಡಾಲ್ ಅವರಿಗಿಂತ ಹಿಂದಿನ ಸ್ಥಾನದಲ್ಲಿದ್ದಾರೆ. ‘‘ಫೆಡರರ್ ಮ್ಯಾಡ್ರಿಡ್‌ಗೆ ಮರಳುತ್ತಿರುವುದು ಟೂರ್ನಿಗೆ ಒಂದು ಉಡುಗೊರೆಯಿದ್ದಂತೆ. ಅವರನ್ನು ಸ್ವಾಗತಿಸಲು ನಮಗೆ ಖುಷಿಯಾಗುತ್ತದೆ’’ ಎಂದು ಟೂರ್ನಿಯ ನಿರ್ದೇಶಕ ಫೆಲಿಸಿಯಾನೊ ಲೊಫೆಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News