13 ಗಂಟೆಗಳ ಕಾರ್ಯಾಚರಣೆ: ಕೊಳವೆಬಾವಿಯೊಳಕ್ಕೆ ಬಿದ್ದ ಬಾಲಕನ ರಕ್ಷಣೆ

Update: 2019-02-21 09:05 GMT

ಹೊಸದಿಲ್ಲಿ, ಫೆ.21: ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆಯಿಂದ 200 ಅಡಿ ಆಳದ ಕೊಳವೆಬಾವಿಯೊಳಕ್ಕೆ ಬಿದ್ದಿದ್ದ 6 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ. ಸುಮಾರು 13 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಣೆಯ ಅಂಬೆಗಾಂವ ತಾಲೂಕಿನ ತೊರಂದಾಲೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಬಾಲಕ ರವಿ ಪಂಡಿತ್ ಕೊಳವೆಬಾವಿಯೊಳಕ್ಕೆ ಬಿದ್ದಿದ್ದ. ಸುಮಾರು 10 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದು ಸ್ಥಳೀಯರು ಮತ್ತು ಪೊಲೀಸರು ಬಾಲಕನನ್ನು ರಕ್ಷಿಸಲು ವಿಫಲರಾಗಿದ್ದರು. ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಕರೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News