ಪರೀಕ್ಷಾ ಪರ್ವ: ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ

Update: 2019-02-21 18:39 GMT

ಪರೀಕ್ಷೆಗೂ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ. ದೇಹ ಮತ್ತು ಮನಸ್ಸು ಆರೋಗ್ಯಕರವಾಗಿದ್ದರೆ ಪರೀಕ್ಷೆಯೂ ಯಶಸ್ವಿ, ಆರೋಗ್ಯ ಹದಗೆಟ್ಟರೆ ಪರೀಕ್ಷೆಯ ಮೇಲೂ ಪರಿಣಾಮ ಬೀರುತ್ತದೆ. ಸಮಯ ಮತ್ತು ಸಮುದ್ರದ ಅಲೆಗಳು ಯಾರನ್ನೂ ಕಾಯಲಾರವು ಎಂಬ ಮಾತೊಂದಿದೆ. ಅದೇ ರೀತಿ ಪರೀಕ್ಷೆ ಕೂಡಾ. ಪರೀಕ್ಷೆಗಾಗಿ ನಾವು ತಯಾರಿರಬೇಕು, ಪರೀಕ್ಷೆ ನಮ್ಮನ್ನು ಕಾಯುವುದಿಲ್ಲ.
ಕಲಿಕೆಯಲ್ಲಿ ಸದಾ ಉನ್ನತ ಶ್ರೇಣಿಯನ್ನು ದಾಖಲಿಸುತ್ತಿದ್ದ ಓರ್ವ ವಿದ್ಯಾರ್ಥಿಗೆ ತಂಪು ಪಾನೀಯ, ತಂಪು ಆಹಾರವೆಂದರೆ ಅಲರ್ಜಿಯಾಗುತ್ತಿತ್ತು. ಅಂತಿಮ ಪರೀಕ್ಷೆಗಿಂತ ಒಂದು ವಾರ ಮೊದಲು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಹಪಾಠಿಗಳ ಒತ್ತಾಯಕ್ಕೆ ಸೇವಿಸಿದ ತಂಪು ಪಾನೀಯ ಆ ವಿದ್ಯಾರ್ಥಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ತೀವ್ರ ಜ್ವರ, ನೆಗಡಿ ದಮ್ಮಿನ ಸಮಸ್ಯೆಯಿಂದ ಬಳಲಿದ ಆ ವಿದ್ಯಾರ್ಥಿ ಪರೀಕ್ಷೆಗೆ ಕಷ್ಟದಲ್ಲಿ ಹಾಜರಾದ. ಎಣಿಸಿದ್ದೆಲ್ಲವನ್ನು ಬರೆಯಲಾಗದೆ ಸಾಧಾರಣ ಅಂಕಗಳೊಂದಿಗೆ ಪಾಸಾದ. ಉದ್ದೇಶವೂ, ಗುರಿಯೂ ಹಾದಿ ತಪ್ಪಿತು.
ವಿದ್ಯಾರ್ಥಿಗಳೇ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾದ ಅಂಶ. ಒಂದು ಸಣ್ಣ ನೆಗಡಿಯೂ ನಿಮಗೆ ತೀವ್ರ ತೊಂದರೆ ಉಂಟು ಮಾಡಬಹುದು. ಹಿತಮಿತವಾದ ಆಹಾರ ಸೇವನೆ ಹೆಚ್ಚು ನೀರು ಸೇವಿಸುವುದು ಉತ್ತಮ. ರಾತ್ರಿ ನಿದ್ದೆಗೆಟ್ಟು ಓದಬೇಡಿ. ಕಲುಷಿತ ಆಹಾರದ ಬಗ್ಗೆ ಎಚ್ಚರವಿರಲಿ. ಅತಿಯಾದ ತಂಪು ಮತ್ತು ಉಷ್ಣ ಆಹಾರದಿಂದ ದೂರವಿರಿ. ನೀರು ಸೇವಿಸುವುದರಿಂದ ನಿಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳಬಹುದು.

Writer - -ಎ.ಆರ್.ಅನಂತಾಡಿ

contributor

Editor - -ಎ.ಆರ್.ಅನಂತಾಡಿ

contributor

Similar News