ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ: ಕಿವೀಸ್ ತಂಡದಲ್ಲಿ ಟಾಡ್ ಆಸ್ಟ್ಲೆ

Update: 2019-02-22 19:00 GMT

ವೆಲ್ಲಿಂಗ್ಟನ್, ಫೆ.22: ಬಾಂಗ್ಲಾದೇಶದ ವಿರುದ್ಧ ಫೆ.28ರಿಂದ ಆರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ 13 ಸದಸ್ಯರ ಕಿವೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಪಿನ್ನರ್ ಟಾಡ್ ಆಸ್ಟ್ಲೆಗೆ ಸ್ಥಾನ ಕಲ್ಪಿಸಲಾಗಿದೆ. ಅಜಾಝ್ ಪಟೇಲ್ ಬದಲಿಗೆ ಆಸ್ಟ್ಲೆ ಸ್ಥಾನ ಪಡೆದಿದ್ದಾರೆ.

 ಡಿಸೆಂಬರ್‌ನಲ್ಲಿ ಶ್ರೀಲಂಕಾವನ್ನು 1-0 ಅಂತರದಿಂದ ಸೋಲಿಸಿದ್ದ ಟೆಸ್ಟ್ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ಆಸ್ಟ್ಲೆ ಮಾತ್ರ ಹೊಸ ಮುಖವಾಗಿದ್ದಾರೆ. ‘‘ಯುಎಇನಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಪಟೇಲ್‌ರನ್ನು ಕೈಬಿಟ್ಟಿರುವುದು ಒಂದು ಕಠಿಣ ನಿರ್ಧಾರ’’ ಎಂದು ಕಿವೀಸ್ ಆಯ್ಕೆ ಸಮಿತಿಯ ಮುಖ್ಯಸ್ಥ ಗವಿನ್ ಲಾರ್ಸೆನ್ ಹೇಳಿದ್ದಾರೆ. 2012ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಆಸ್ಟ್ಲೆ ಆ ಬಳಿಕ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆ.28ರಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News