ಪುಲ್ವಾಮ ದಾಳಿ: ಉಗ್ರರು ಬಳಸಿದ್ದ ಕಾರಿನ ವಿವರ ಹೀಗಿದೆ...

Update: 2019-02-23 15:53 GMT

ಶ್ರೀನಗರ, ಫೆ.23: ಪುಲ್ವಾಮದಲ್ಲಿ ಫೆಬ್ರವರಿ 14ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣದಲ್ಲಿ ಭಯೋತ್ಪಾದಕರು ಬಳಸಿದ್ದ ಕಾರಿನ ಕುರಿತ ವಿವರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಮಾರುತಿ ಕಂಪೆನಿಯ ಕೆಂಪು ಬಣ್ಣದ ಕಾರು ಇದಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ ಹಿನ್ನೆಲೆಯಲ್ಲಿ ಕಂಪೆನಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 ಸ್ಥಳದಲ್ಲಿ ದೊರೆತ ಕಾರಿನ ಭಾಗವೊಂದರ ಚೂರನ್ನು ಪರಿಶೀಲಿಸಿದ ಬಳಿಕ ಇದು 2010-11ರಲ್ಲಿ ನಿರ್ಮಿಸಲ್ಪಟ್ಟಿರುವ ಮಾರುತಿ ಇಕೊ ಕಾರು ಆಗಿರಬಹುದು ಮತ್ತು ಕಾರಿಗೆ ಪುನಃ ಬಣ್ಣಬಳಿಯಲಾಗಿತ್ತು ಎಂದು ತಿಳಿಸಲಾಗಿದೆ. ಕಾರಿನ ಶಾಕ್ ಅಬ್ಸಾರ್ಬರ್‌ನ ಚೂರನ್ನೂ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆಯಿಂದ ಕಾರನ್ನು ಉತ್ಪಾದಿಸಿದ ದಿನಾಂಕ ಮತ್ತು ಮಾರಾಟ ಮಾಡಿದ ದಿನಾಂಕವನ್ನು ಖಚಿತ ಪಡಿಸಿಕೊಳ್ಳಬಹುದಾಗಿದೆ.

ಕಾಶ್ಮೀರದಲ್ಲಿ ಕಳವು ಮಾಡಲಾಗಿರುವ ಕಾರಿನ ಪ್ರಕರಣ ಅಥವಾ ಎಫ್‌ಐಆರ್ ದಾಖಲಾಗಿರುವ ಪ್ರಕರಣಗಳ ಪರಿಶೀಲನೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News