ಜೈಶೆ ಮುಹಮ್ಮದ್‌ನ ಮುಖ್ಯ ಕಾರ್ಯಾಲಯ ವಶಕ್ಕೆ ತೆಗೆದುಕೊಂಡಿಲ್ಲ: ಪಾಕ್ ಸ್ಪಷ್ಟನೆ

Update: 2019-02-23 18:26 GMT

ಇಸ್ಲಾಮಾಬಾದ್,ಫೆ.21: ಪಾಕಿಸ್ತಾನ ಸರಕಾರವು ಜೈಶೆ ಮುಹಮ್ಮದ್ ಉಗ್ರಗಾಮಿ ಗುಂಪಿನ ಮುಖ್ಯ ಕಾರ್ಯಾಲಯದ ಆಡಳಿತಾತ್ಮಕ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದೆಯೆಂಬ ಮಾಧ್ಯಮಗಳ ವರದಿಯನ್ನು ಪಾಕಿಸ್ತಾನದ ಮಾಹಿತಿ ಸಚಿವ ಾವದ್ ಚೌಧುರಿ ಶನಿವಾರ ಅಲ್ಲಗಳೆದಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ ಸರಕಾರವು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕಟ್ಟಡವು ಮದ್ರಸ ಆಗಿದ್ದು, ಅಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೂ, ಪಾಕ್ ಸರಕಾರದ ಈ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿದ್ದಾರೆ.

ಪಂಜಾಬ್‌ನ ಪ್ರಾಂತ ಸರಕಾರವು ಬ ಬಹವಾಲ್‌ಪುರದ ಮಸೀದಿ ಹಾಗೂ ಮದ್ರಸಾ ಸಂಕೀರ್ಣದ ನಿಯಂತ್ರಣದ ಆಡಳಿತಾತ್ಮಕ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಪಾಕ್ ಗೃಹ ಸಚಿವಾಲಯ ಪ್ರಕಟಿಸಿದ ಹಿನ್ನೆಲೆಯಲ್ಲಿ ಪಾಕ್ ಮಾಹಿತಿ ಸಚಿವರು ಈ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಸಂಕೀರ್ಣವು ಹವಾಲ್‌ಪುರ ಪ್ರದೇಶದಲ್ಲಿರುವ ಜೈಶೆ ಮುಹಮ್ಮದ್‌ನ ಆಡಳಿತಾತ್ಮಕ ಕಚೇರಿಯೆಂದು ನಂಬಲಾಗಿದೆ.

 ಪಂಜಾಬ್ ಪ್ರಾಂತ ಸರಕಾರವು, ಮದ್ರಸತುಲ್ ಸಬೀರ್ ಹಾಗೂ ಜಾಮಿಯೆ ಮಸ್ಜೀದ್ ಸುಬನ್ಹಲ್ಲಾವನ್ನು ಒಳಗೊಂಡ ಸಂಕೀರ್ಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಹಾಗೂ ಅದರ ವ್ಯವಹಾರಗಳನ್ನು ನಿರ್ವಹಿಸಲು ಆಡಳಿತಗಾರರೊಬ್ಬರನ್ನು ನೇಮಿಸಿರುವುದಾಗಿ ಪಾಕ್ ಗೃಹ ಸಚಿವರು ತಿಳಿಸಿದ್ದಾರೆ.

ಈ ಮದ್ರಸಾವು ಜೆಇಎಂನ ಮುಖ್ಯಕಾರ್ಯಾಲಯವಾಗಿತ್ತೆಂಬ ಅಪಪ್ರಚಾರವನ್ನು ಭಾರತ ಸರಕಾರ ನಡೆಸುತ್ತಿದೆ. ಪಂಜಾಬ್ ಪ್ರಾಂತ ಸರಕಾರವು ಪತ್ರಕರ್ತರಿಗೆ ಈ ಮದ್ರಸಾಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ತಿಳಿಸಲು ಪ್ರವಾಸವನ್ನು ಏರ್ಪಡಿಸಲಿದೆ ಹಾಗೂ ಆ ಮೂಲಕ ಅವು ತಾವಾಗಿಯೇ ಸತ್ಯವನ್ನು ಅರಿತುಕೊಳ್ಲುವಂತೆ ಮಾಡಲಿದೆ ಎಂದು ಚೌಧುರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News