ಸರಕಾರಿ ಕುಟುಂಬ ಕಲ್ಯಾಣ ಕ್ಲಿನಿಕ್‌ಗಳು ಗರ್ಭಪಾತಕ್ಕೆ ಶಿಫಾರಸು ಮಾಡುವಂತಿಲ್ಲ

Update: 2019-02-23 18:29 GMT

 ವಾಶಿಂಗ್ಟನ್,ಫೆ.23: ಗರ್ಭಪಾತದ ವಿರುದ್ಧ ಕಠಿಣಕ್ರಮಗಳನ್ನು ಕೈಗೊಳ್ಳಹೊರಟಿರುವ ಟ್ರಂಪ್ ಸರಕಾರವು, ಶುಕ್ರವಾರ ಸರಕಾರದಿಂದ ನಡೆಸಲ್ಪಡುವ ಕುಟುಂಬ ಕಲ್ಯಾಣ ಕ್ಲಿನಿಕ್‌ಗಳು, ಗರ್ಭಪಾತ ಮಾಡುವಂತೆ ಮಹಿಳೆಯರಿಗೆ ಶಿಫಾರಸು ಮಾಡುವುದನ್ನು ನಿಷೇಧಿಸಿದೆ.

ಗರ್ಭಪಾತ ನಡೆಸುವ ಕೇಂದ್ರಗಳ ಸಮೀಪದಲ್ಲಿ ಸರಕಾರಿ ಕುಟುಂಬ ಕಲ್ಯಾಣ ಕ್ಲಿನಿಕ್‌ಗಳನ್ನು ಸ್ಥಾಪಿಸುವುದನ್ನು ಕೂಡಾ ಟ್ರಂಪ್ ಸರಕಾರ ಶುಕ್ರವಾರ ಪ್ರಕಟಿಸಿದ ಆದೇಶದಲ್ಲಿ ನಿಷೇಧಿಸಿದೆ.

ಈವರೆಗೆ ಸಾರ್ವಜನಿಕ ಕುಟುಂಬ ಕಲ್ಯಾಣ ಕ್ಲಿನಿಕ್‌ಗಳ ಸಿಬ್ಬಂದಿಯು, ತಮ್ಮ ಗ್ರಾಹಕರಿಗೆ ಗರ್ಭಪಾತ ನಡೆಸುವ ಬಗ್ಗೆ ಚರ್ಚಿಸಲು ಅನುಮತಿಯಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶವಿರುವುದಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.

 ಟ್ರಂಪ್ ಸರಕಾರದ ಈ ಆದೇಶದ ವಿರುದ್ಧ ಅಮೆರಿಕದ ವಿವಿಧ ಮಹಿಳಾ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಗರ್ಭಪಾತದ ಕುರಿತ ಟ್ರಂಪ್ ಸರಕಾರದ ಕಠಿಣ ನಿಲುವಿನಿಂದಾಗಿ ಕಡಿಮೆ ವರಮಾನದ ಮಹಿಳೆಯರಿಗೆ ಜನನನಿಯಂತ್ರಣ, ಕ್ಯಾನ್ಸರ್ ತಪಾಸಣೆ ಹಾಗೂ ಲೈಂಗಿಕವಾಗಿ ಹರಡುವ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ದುಬಾರಿಯಾಗಲಿದೆಯೆಂದು ಅಮೆರಿಕದ ವೈದ್ಯಕೀಯ ಅಸೋಸಿಯೇಶನ್ ಅಸಮಾಧಾನ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News