ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ:ರಾಜೀವ್ ಸಕ್ಸೇನಾಗೆ ಜಾಮೀನು

Update: 2019-02-25 14:23 GMT

ಹೊಸದಿಲ್ಲಿ, ಫೆ.25: ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ರಾಜೀವ್ ಸಕ್ಸೇನಾಗೆ ದಿಲ್ಲಿಯ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರುಗೊಳಿಸಿದೆ.

ಜಾಮೀನು ಕೋರಿ ಸಕ್ಸೇನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್, 5 ಲಕ್ಷ ರೂ. ಮೊತ್ತದ ಜಾಮೀನು ಬಾಂಡ್, ಇಷ್ಟೇ ಮೊತ್ತದ ಎರಡು ಜಾಮೀನುಗಳನ್ನು ಒದಗಿಸಿ ಜಾಮೀನು ಪಡೆಯುವಂತೆ ಸೂಚಿಸಿದರು. ಅಲ್ಲದೆ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಬಾರದು ಮತ್ತು ಅಗತ್ಯಬಿದ್ದಾಗ ವಿಚಾರಣೆಗೆ ಹಾಜರಾಗುವಂತೆ , ನ್ಯಾಯಾಲಯದ ಅನುಮತಿ ಪಡೆಯದೆ ದೇಶ ಬಿಟ್ಟು ತೆರಳಬಾರದು ಎಂಬ ಷರತ್ತು ವಿಧಿಸಿದ್ದಾರೆ.

3,600 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ದುಬೈಯಲ್ಲಿರುವ ಎರಡು ಸಂಸ್ಥೆಗಳ ನಿರ್ದೇಶಕ ರಾಜೀವ್ ಸಕ್ಸೇನರನ್ನು ಹೆಸರಿಸಲಾಗಿದೆ. ಒಪ್ಪಂದದ ಮಧ್ಯವರ್ತಿ ಎನ್ನಲಾಗಿರುವ ಕ್ರಿಶ್ಚಿಯನ್ ಮಿಶೆಲ್, ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಾಜಿ ನಿರ್ದೇಶಕರಾದ ಗ್ಯುಸೆಪ್ ಓರ್ಸಿ ಮತ್ತು ಬ್ರೂನೊ ಸ್ಪಗ್ನೊಲಿನಿ, ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿ, ಸಕ್ಸೇನಾರ ಪತ್ನಿ ಶಿವಾನಿ ಅವರು ಇತರ ಆರೋಪಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News