×
Ad

ಪ್ರಧಾನಿಯವರೇ, ಚುನಾವಣಾ ರ್ಯಾಲಿ ಮುಗಿಯಿತೇ, ಇನ್ನೂ ಇದೆಯೇ: ಹಿರಿಯ ಯೋಧರ ಪ್ರಶ್ನೆ

Update: 2019-02-26 17:00 IST

ಹೊಸದಿಲ್ಲಿ, ಫೆ.26: ರಾಷ್ಟ್ರೀಯ ಯುದ್ಧ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಫೇಲ್‍ ಮತ್ತಿತರ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, “ಮೋದಿಯವರೇ ಇದು ಚುನಾವಣಾ ರ್ಯಾಲಿಯಲ್ಲ” ಎಂದಿತ್ತು. ಇದೀಗ ಹಿರಿಯ ಯೋಧರು ಮತ್ತು ಪತ್ರಕರ್ತರು ಮೋದಿ ರಾಜಕೀಯ ಭಾಷಣವನ್ನು ವಿರೋಧಿಸಿದ್ದು, ಇದು ಸೂಕ್ತವಾದ ವೇದಿಕೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಸಮಾರಂಭವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡ ಬಗ್ಗೆ ಹಲವು ಮಂದಿ ಹಿರಿಯ ಯೋಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಜರ್ ಡಿ.ಪಿ.ಸಿಂಗ್ ಈ ಬಗ್ಗೆ ಟ್ವೀಟ್ ಮಾಡಿ, "ಚುನಾವಣಾ ರ್ಯಾಲಿ ಮುಗಿಯಿತೇ ಅಥವಾ ಇನ್ನೂ ಇದೆಯೇ?" ಎಂದು ಪ್ರಶ್ನಿಸಿ ಅಣಕಿಸಿದ್ದಾರೆ.

ಪವಿತ್ರ ವೇದಿಕೆಯನ್ನು ರಾಜಕೀಯ ಉದ್ದೇಶಗಳಿಗೆ ಮೋದಿ ಬಳಸಿಕೊಂಡಿರುವುದು ಅಸಮರ್ಥನೀಯ ಎಂದು ವಿ.ಕೆ.ಸಿಂಗ್ ಟ್ವಿಟರ್‍ ನಲ್ಲಿ ಅಸಮಾಧಾನ ಸೂಚಿಸಿದ್ದಾರೆ. ಇಂತಹ ವೇದಿಕೆಗಳನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳುವುದು ನಿಲ್ಲಿಸಿ ಎಂದು ಗುರ್ಮೀತ್ ಕನ್ವಲ್ ಎಂಬವವರು ಸಲಹೆ ಮಾಡಿದ್ದಾರೆ.

ಮಾಜಿ ಯೋಧರಾದ ಕರ್ನಲ್ ಅಶೋಕ್, ಕರ್ನಲ್ ದಿನೇಶ್ ಕುಮಾರ್ ಕೆ.ಸಿ.ಸಿಂಗ್, ಡಿ.ಕೆ.ಕೂಪರ್ ಹೀಗೆ ಹಲವು ಮಂದಿ ಮೋದಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News