ನಾಳೆಯಿಂದ ಸಂಜೋತಾ ಎಕ್ಸ್‌ಪ್ರೆಸ್ ಸೇವೆ ಪುನರಾರಂಭ: ರೈಲ್ವೆ ಇಲಾಖೆ
Update: 2019-03-02 19:40 IST
ಹೊಸದಿಲ್ಲಿ,ಮಾ.2: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಚರಿಸುವ ಸಂಜೋತಾ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭಕ್ಕೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದು,ಮೊದಲ ರೈಲು ಮಾ.3ರಂದು ದಿಲ್ಲಿಯಿಂದ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೋರ್ವರು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದರು. ರೈಲು ಸೋಮವಾರ ಲಾಹೋರದಿಂದ ದಿಲ್ಲಿಗೆ ಮರುಪ್ರಯಾಣವನ್ನು ಆರಂಭಿಸಲಿದೆ.
ಬಾಲಕೋಟ್‌ನಲ್ಲಿಯ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯುಪಡೆಯು ದಾಳಿಯನ್ನು ನಡೆಸಿದ ಬೆನ್ನಿಗೆ ಪಾಕಿಸ್ತಾನವು ತನ್ನ ರೈಲು ಸೇವೆಯನ್ನು ಸ್ಥಗಿತಗೊಳಿಸಿದ್ದರೆ,ಭಾರತವು ಫೆ.28ರಂದು ಸಂಜೋತಾ ಎಕ್ಸ್‌ಪ್ರೆಸ್‌ನ ಸಂಚಾರವನ್ನು ರದ್ದುಗೊಳಿಸಿತ್ತು.
ಭಾರತೀಯ ಪ್ರದೇಶದಲ್ಲಿ ಈ ರೈಲು ದಿಲ್ಲಿಯಿಂದ ಅಟ್ಟಾರಿವರೆಗೆ ತೆರಳುತ್ತದೆ ಮತ್ತು ಪಾಕಿಸ್ತಾನದ ಪ್ರದೇಶದಲ್ಲಿ ಲಾಹೋರದಿಂದ ವಾಘಾದವರೆಗೆ ಬರುತ್ತದೆ. ಅಲ್ಲಿ ಪ್ರಯಾಣಿಕರು ರೈಲುಗಳನ್ನು ಬದಲಿಸಿ ಪ್ರಯಾಣವನ್ನು ಮುಂದುವರಿಸಬೇಕಿದೆ.