ವಿವೇಕ್ ದೋವಲ್‌ ರಿಂದ ಮಾನನಷ್ಟ ಪ್ರಕರಣ: ಜೈರಾಮ್ ರಮೇಶ್ ಸೇರಿ ಮೂವರಿಗೆ ದಿಲ್ಲಿ ಕೋರ್ಟ್ ಸಮನ್ಸ್

Update: 2019-03-02 14:17 GMT

ಹೊಸದಿಲ್ಲಿ,ಮಾ.2: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಅವರು ಕಾರವಾನ್ ಮ್ಯಾಗಝಿನ್ ವಿರುದ್ಧ ದಾಖಲಿಸಿರುವ ಮಾನನಷ್ಟ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯವು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪತ್ರಿಕೆಯ ಸಂಪಾದಕ ಮತ್ತು ವರದಿಗಾರರಿಗೆ ಸಮನ್ಸ್ ಹೊರಡಿಸಿದ್ದು,ಎ.25ರಂದು ತನ್ನೆದುರು ಹಾಜರಾಗುವಂತೆ ಸೂಚಿಸಿದೆ.

ತೆರಿಗೆ ಸ್ವರ್ಗವೆಂದೇ ಹೆಸರಾಗಿರುವ ಕೇಮನ್ ದ್ವೀಪದಲ್ಲಿ ವಿವೇಕ್ ದೋವಲ್ ಅವರು ಹೆಝ್ ಫಂಡ್‌ವೊಂದನ್ನು ನಡೆಸುತ್ತಿದ್ದಾರೆ ಎಂದು ‘ಕಾರವಾನ್’ ತಾನು ಪ್ರಕಟಿಸಿದ್ದ ಲೇಖನದಲ್ಲಿ ಆರೋಪಿಸಿತ್ತು. ನಂತರ ಸುದ್ದಿಗೋಷ್ಠಿಯೊಂದರಲ್ಲಿ ಜೈರಾಮ್ ರಮೇಶ್ ಅವರು ಈ ಆರೋಪವನ್ನು ಪುನರುಚ್ಚರಿಸಿದ್ದರು.

ಜ.30ರಂದು ನ್ಯಾಯಾಲಯದ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದ ವಿವೇಕ್, ಇವು ಆಧಾರರಹಿತ ಮತ್ತು ಸುಳ್ಳು ಆರೋಪಗಳಾಗಿವೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News