ಸಕಾರಾತ್ಮಕ ಬೆಳವಣಿಗೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

Update: 2019-03-02 15:52 GMT

ವಿಶ್ವಸಂಸ್ಥೆ, ಮಾ.2: ಪಾಕಿಸ್ತಾನದ ವಶದಲ್ಲಿದ್ದ ಭಾರತದ ಪೈಲಟ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಮರಳಿರುವುದನ್ನು ಶ್ಲಾಘಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಉಭಯ ದೇಶಗಳ ನಡುವಿನ ಮುಂಬರುವ ರಚನಾತ್ಮಕ ಮಾತುಕತೆಯ ನಿಟ್ಟಿನಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದಿದ್ದಾರೆ.

 ಪೈಲಟ್‌ರನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಉಭಯ ದೇಶಗಳ ಮುಖಂಡರಿಗೆ ಕರೆ ಮಾಡಿದ ಪ್ರಧಾನ ಕಾರ್ಯದರ್ಶಿ, ಈ ಸಕಾರಾತ್ಮಕ ಉತ್ಸಾಹವನ್ನು ಮುಂದುವರಿಸಿಕೊಂಡು ಇನ್ನಷ್ಟು ರಚನಾತ್ಮಕ ಮಾತುಕತೆಯಲ್ಲಿ ತೊಡಗಿಕೊಳ್ಳುವಂತೆ , ಮತ್ತು ಅಗತ್ಯಬಿದ್ದರೆ ತಮ್ಮ ಕಚೇರಿಯ ನೆರವು ಯಾವತ್ತೂ ಲಭ್ಯವಿರುತ್ತದೆ ಎಂದು ತಿಳಿಸಿರುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News