ರಾಜೀವ್ ಕುಮಾರ್ ಗೆ ಆರ್ಥಿಕ ಅಪರಾಧ, ಎಸ್‌ಟಿಎಫ್‌ನ ಹೆಚ್ಚುವರಿ ಉಸ್ತುವಾರಿ
Update: 2019-03-02 22:41 IST
ಕೋಲ್ಕತಾ, ಮಾ. 2: ಆರ್ಥಿಕ ಅಪರಾಧಗಳ ರಾಜ್ಯ ನಿರ್ದೇಶನಾಲಯ ಹಾಗೂ ಕೋಲ್ಕತಾ ಪೊಲೀಸ್‌ನ ವಿಶೇಷ ಕ್ಷಿಪ್ರ ಕಾರ್ಯ ಪಡೆ (ಎಟಿಎಫ್)ಯ ಹೆಚ್ಚುವರಿ ಉಸ್ತುವಾರಿಯನ್ನು ಪಶ್ಚಿಮಬಂಗಾಳ ಸರಕಾರ ನಗರದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೀಡಿದೆ.
ನಗರ ಪೊಲೀಸ್ ಆಯುಕ್ತರಾಗಿ ತನ್ನ ಅಧಿಕಾರಾವಧಿ ಪೂರ್ಣಗೊಳಿಸಿ ಇತ್ತೀಚೆಗೆ ರಾಜ್ಯ ಸಿಐಡಿಯ ವರಿಷ್ಠರಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ರಾಜೀವ್ ಕುಮಾರ್ ಮುಂದಿನ ಆದೇಶ ಬರುವವರೆಗೆ ಎರಡು ಇಲಾಖೆಗಳ ಹೆಚ್ಚುವರಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ರಾಜ್ಯ ಗೃಹ ಇಲಾಖೆ ಈ ಆದೇಶ ನೀಡಿದೆ.