ಚಂದಾ ಕೊಚ್ಚಾರ್, ಕನೋಡಿಯಾ ವಿಚಾರಣೆ

Update: 2019-03-04 13:29 GMT

ಹೊಸದಿಲ್ಲಿ, ಮಾ.4: ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್‌ನ ಸಿಇಒ ಆಗಿದ್ದ ಸಂದರ್ಭ ಬ್ಯಾಂಕ್ ನೀಡಿದ್ದ ಸಾಲದ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಸತತ ಮೂರನೇ ದಿನ ಕೊಚ್ಚಾರ್‌ರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಟ್ರಿಕ್ಸ್ ಫರ್ಟಿಲೈಸರ್ಸ್‌ ಆ್ಯಂಡ್ ಕೆಮಿಕಲ್ಸ್‌ನ ಅಧ್ಯಕ್ಷ , ಎಸ್ಸಾರ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರ ಅಳಿಯ ನಿಶಾಂತ್ ಕನೋಡಿಯರನ್ನೂ ವಿಚಾರಣೆ ನಡೆಸಿದೆ.

2010ರಲ್ಲಿ ಕೊಚ್ಚಾರ್ ಐಸಿಐಸಿಐ ಬ್ಯಾಂಕ್‌ನ ಸಿಇಒ ಆಗಿದ್ದ ಸಂದರ್ಭ ಅಮೆರಿಕದಲ್ಲಿ ಕಾರ್ಯಾಚರಿಸುತ್ತಿದ್ದ ಎಸ್ಸಾರ್ ಸಂಸ್ಥೆಗೆ 520 ಮಿಲಿಯನ್ ಡಾಲರ್ ಸಾಲ ಮಂಜೂರಾಗಿದೆ. ಅಲ್ಲದೆ ಕನೋಡಿಯಾ ಮಾಲಕತ್ವದ, ಮಾರಿಷಸ್ ಮೂಲದ ಫಸ್ಟ್‌ಲ್ಯಾಂಡ್ ಹೋಲ್ಡಿಂಗ್ಸ್ ಸಂಸ್ಥೆಯು ಕೊಚ್ಚಾರ್ ಪತಿ ದೀಪಕ್ ಮಾಲಕತ್ವದ ನ್ಯೂಪವರ್ ರಿನೀವೆಬಲ್ಸ್ ಪ್ರೈ.ಲಿ. ಸಂಸ್ಥೆಗೆ 325 ಕೋಟಿ ರೂ. ನೀಡಿರುವುದು ಇದುವರೆಗೆ ನಡೆಸಿದ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಹಿರಿಯ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News