ಪಾರಿಕ್ಕರ್ ಗೆ ಮುಂದುವರಿದ ಹಂತದ ಕ್ಯಾನ್ಸರ್: ಗೋವಾ ಸಚಿವ
ಪಣಜಿ, ಮಾ. 4: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕರ್ ಮುಂದುವರಿದ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ . ಆದರೆ, ಅವರು ಈಗಲೂ ರಾಜ್ಯದ ಜನತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಸಂಪುಟ ಸಚಿವ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸರ್ದೇಸಾಯಿ, ಸ್ಮಶಾನಕ್ಕೆ ನಿಧಿ ಬಿಡುಗಡೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಹಾಗೂ ಇನ್ನೊಂದು ಕಾಮಗಾರಿಗೆ ಅನುಮೋದನೆ ಪಡೆಯಲು ನಾನು ಪಾರಿಕರ್ ಅವರನ್ನು ಭೇಟಿಯಾಗಲಿದ್ದೇನೆ ಎಂದಿದ್ದಾರೆ.
‘‘ನಾನು ಪಾರಿಕ್ಕರ್ ಅವರನ್ನು ಭೇಟಿಯಾಗಲು ಹಾಗೂ ಕಾಮಗಾರಿ ಮಂಜೂರು ಮಾಡಿಕೊಳ್ಳಲು ಹೋಗಲಿದ್ದೇನೆ. ಇದು ಮುಖ್ಯಮಂತ್ರಿ ಮುಂದುವರಿದ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಜನರಿಗಾಗಿ ಕೆಲಸ ಮಾಡುತ್ತಿರುವುದನ್ನು ತೋರಿಸುತ್ತದೆ. ರಾಜ್ಯದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಕೂಡ ಬೆಂಬಲ ನೀಡುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಕ್ಯಾನ್ಸರ್ ಜಾಗೃತಿ ಕುರಿತ ಸಮಾವೇಶವೊಂದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದನ್ನು ನೆನಪಿಸಿಕೊಂಡ ಸರ್ದೇಸಾಯಿ, ಕ್ಯಾನ್ಸರ್ ವ್ಯಕ್ತಿಯ ಹಾಗೂ ಕುಟುಂಬದ ಕನಸನ್ನು ಮಾತ್ರ ಕೊಲ್ಲುವುದಲ್ಲ. ಅದು ರಾಜ್ಯದ ಕನಸನ್ನು ಕೂಡ ಕೊಲ್ಲುತ್ತದೆ ಎಂದರು.