ವಾಯು ದಾಳಿ ಚುನಾವಣಾ ಗಿಮಿಕ್: ನವಜೋತ್ ಸಿಂಗ್ ಸಿಧು

Update: 2019-03-04 18:10 GMT

ಹೊಸದಿಲ್ಲಿ, ಮಾ. 4: ಪಾಕಿಸ್ತಾನದ ಭಯೋತ್ಪಾದನಾ ಶಿಬಿರದ ಮೇಲೆ ಭಾರತದ ವಾಯು ಪಡೆ ದಾಳಿ ನಡೆಸಿರುವುದು ಚುನಾವಣಾ ಗಿಮಿಕ್ ಎಂದು ಪಂಜಾಬ್‌ನ ಸಚಿವ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಂಧು ಹೇಳಿದ್ದಾರೆ.

ಗಡಿಯಾಚೆಗೆ ವಾಯು ದಾಳಿ ನಡೆಸಿದ ಕುರಿತಂತೆ ಕೇಂದ್ರದಿಂದ ವಿವರ ಆಗ್ರಹಿಸಿದ ಇತ್ತೀಚೆಗಿನ ವ್ಯಕ್ತಿ ಸಿಧು. ದಾಳಿ ಹಾಗೂ ಸಾವಿನ ಸಂಖ್ಯೆ ಬಗ್ಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪುರಾವೆ ಕೇಳಿದ್ದರು.

 ‘‘300 ಉಗ್ರರು ಹತರಾಗಿದ್ದಾರೆ ಹೌದೇ ?, ಅಲ್ಲವೇ ?’’ ಎಂದು ಸಿಧು ಟ್ವೀಟ್ ಮಾಡಿದ್ದಾರೆ. ‘‘ಉದ್ದೇಶ ಏನಾಗಿತ್ತು ?, ನೀವು ಬುಡಮೇಲುಗೊಳಿಸಿರುವುದು ಭಯೋತ್ಪಾದಕರನನ್ನೇ ಅಥವಾ ಮರಗಳನ್ನೇ ?, ಇದು ಚುನಾವಣಾ ಗಿಮಿಕ್ ಆಗಿತ್ತೇ ?, ಸೇನೆಯನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ. ಅದು ರಾಷ್ಟ್ರದಷ್ಟೇ ಪವಿತ್ರವಾದುದು’’ ಎಂದು ಅವರು ಹೇಳಿದ್ದಾರೆ.

 ವಾಯು ದಾಳಿ ಕರ್ನಾಟಕದ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷ ಜಯಗಳಿಸಲು ನೆರವಾಗಲಿದೆ ಎಂದ ಬಿ.ಎಸ್. ಯಡಿಯೂರಪ್ಪ ಅವರ ಪ್ರತಿಪಾದನೆ, ಒಂದು ವೇಳೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗದೇ ಇದ್ದರೆ, ಭಾರತದ ಸಂಸತ್ತು ಹಾಗೂ ಅಸ್ಸಾಂ ವಿಧಾನ ಸಭೆ ಮೇಲೆ ಕೂಡ ಪಾಕಿಸ್ತಾನ ದಾಳಿ ನಡೆಸಬಹುದು ಎಂದು ಆರೋಪಿಸಿದ ಹಿಮಾಂತ ಬಿಸ್ವಾಸ್ ಶರ್ಮಾ ಅವರಂತಹ ಬಿಜೆಪಿ ನಾಯಕರ ಹೇಳಿಕೆಯ ವರದಿಯನ್ನು ಸಿಧು ಉಲ್ಲೇಖಿಸಿದ್ದಾರೆ.

ಭಾರತದ ವಾಯು ಪಡೆಯ ಜೆಟ್‌ಗಳು ಮರಗಳು ತುಂಬಿದ ಪ್ರದೇಶಕ್ಕೆ ಬಾಂಬ್ ಹಾಕಿದವು. ಯಾವುದೇ ಹಾನಿ ಅಥವಾ ಗಾಯಗಳಾಗಿಲ್ಲ. ರಾಯ್ಟರ್ಸ್‌ನ ಇಬ್ಬರು ವರದಿಗಾರರು ಬಾಂಬ್ ಹಾಕಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಂಬ್ ಸ್ಫೋಟದಿಂದ ನಾಲ್ಕು ಗೊಡ್ಡ ಕುಳಿಗಳಾಗಿವೆ ಹಾಗೂ 15 ಫೈನ್ ಮರಗಳಿಗೆ ಹಾನಿ ಆಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹಾಗೂ ಗ್ರಾಮಸ್ತರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾದ್ಯಮಗಳು ಮಾಡಿದ ವರದಿಯನ್ನು ಉಲ್ಲೇಖಿ ಸಿಧಿ ವೀಡಿಯೊ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News