ರೈಲಿನಿಂದ ಬೇರ್ಪಟ್ಟ ಎಂಜಿನ್, 3 ಬೋಗಿಗಳು

Update: 2019-03-07 15:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ. 7: ಮುಂಬೈಗೆ ತೆರಳುತ್ತಿದ್ದ ರೈಲಿನಿಂದ ಎಂಜಿನ್ ಹಾಗೂ ಮೂರು ಬೋಗಿಗಳು ಪ್ರತ್ಯೇಕಗೊಂಡು ಸ್ಪಲ್ಪ ದೂರ ಚಲಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮನ್ಮಾದ್-ಮುಂಬೈ ಪಂಚವಟಿ ಎಕ್ಸ್‌ಪ್ರೆಸ್‌ನ ಎಂಜಿನ್ 15 ಬೋಗಿಗಳನ್ನು ಹೊಂದಿತ್ತು. ಆದರೆ, ಸುಮಾರು ಬೆಳಗ್ಗೆ 8.30ರ ಹೊತ್ತಿಗೆ ಎಂಜಿನ್ 12 ಬೋಗಿಗಳಿಂದ ಕಳಚಿಕೊಂಡು ಕೆಲವು ಕಿ.ಮೀ. ಸಂಚರಿಸಿತು ಎಂದು ಕೇಂದ್ರ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಥಾಣೆ ಜಿಲ್ಲೆಯ ಕಲ್ಯಾಣ್ ರೈಲು ನಿಲ್ದಾಣದ ಸಮೀಪ ಸಂಭವಿಸಿದೆ. ಇಲ್ಲಿಂದ ಕೊನೆಯ ನಿಲುಗಡೆಯಾದ ದಕ್ಷಿಣ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ಗೆ 58 ಕಿ.ಮೀ. ದೂರವಿತ್ತು. ಘಟನೆಯಿಂದ ಯಾವುದೇ ರೀತಿಯ ಹಾನಿಯಾಗಿಲ್ಲ. ಇದಕ್ಕೆ ಕಾರಣವಾದ ಅಂಶದ ಬಗ್ಗೆ ತನಿಖೆ ನಡೆಸಲಿದ್ದೇವೆ. ಇತರ ಬೋಗಿಗಳಿಂದ ಕಳಚಿಕೊಂಡ ಎಂಜಿನ್ ಹಾಗೂ ಮೂರು ಬೋಗಿಗಳು ಎಷ್ಟು ಕಿ.ಮೀ. ಚಲಿಸಿತು ಎಂಬುದು ಇನ್ನಷ್ಟೆ ತಿಳಿಯಬೇಕಿದೆ ಎಂದು ಕೇಂದ್ರ ರೈಲ್ವೆಯ ವಕ್ತಾರ ಸುನಿಲ್ ಉದಾಸಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News