ಯಾಸಿನ್ ಮಲಿಕ್ ವಿರುದ್ಧ ಪಿಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲು

Update: 2019-03-07 15:49 GMT

  ಶ್ರೀನಗರ, ಮಾ. 7: ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ಡೆ (ಪಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘‘ನನ್ನ ವಿರುದ್ಧ ಪಿಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನನ್ನನ್ನು ಜಮ್ಮು ಜಿಲ್ಲೆಯ ಕೋಟ್ ಬಲ್ವಾಲ್ ಜೈಲಿಗೆ ವರ್ಗಾಯಿಸಲಿದ್ದಾರೆ’’ ಎಂದು ಯಾಸಿನ್ ಮಲಿಕ್ ತಿಳಿಸಿದ್ದಾರೆ ಎಂದು ಮಾಹಿತಿದಾರರು ಹೇಳಿದ್ದಾರೆ. ಜಮ್ಮು ಹಾಗೂ ಕಾಶ್ಮೀರ ವಿಮೋಚನೆ ರಂಗದ ನಾಯಕರಾಗಿರುವ ಯಾಸಿನ್ ಮಲಿಕ್ ಅವರನ್ನು ಫೆಬ್ರವರಿ 22ರಂದು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅನಂತರ ಅವರನ್ನು ಶ್ರೀನಗರದ ಕೋಥಿಬಾಘ್ ಪೊಲೀಸ್ ಸಿಟಿಯಲ್ಲಿ ಇರಿಸಲಾಗಿತ್ತು. ಪಿಎಸ್‌ಎ ಅಡಿಯಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಓರ್ವ ವ್ಯಕ್ತಿಯನ್ನು ಯಾವುದೇ ನ್ಯಾಯಾಂಗ ಮಧ್ಯಪ್ರವೇಶ ಇಲ್ಲದೆ 6 ತಿಂಗಳುಗಳ ಕಾಲ ವಶದಲ್ಲಿ ಇರಿಸಿಕೊಳ್ಳಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News