ರಫೇಲ್ ಪ್ರಶ್ನಿಸುತ್ತಿರುವವರ ಬಾಯಿ ಮುಚ್ಚಿಸಲು ಸರಕಾರ ಯತ್ನ: ಸಿಪಿಎಂ

Update: 2019-03-07 16:54 GMT

ಹೊಸದಿಲ್ಲಿ,ಮಾ.7: ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿರುವವರನ್ನು ಸರಕಾರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಒಪ್ಪಂದದ ಬಗ್ಗೆ ಸಾರ್ವಜನಿಕವಾಗಿ ಹೊರಬರುತ್ತಿರುವ ಮಾಹಿತಿಗಳು ಪ್ರಮಾಣೀಕೃತವಾಗಿವೆ ಎಂದು ಸರಕಾರವೇ ಒಪ್ಪಿದಂತಾಗಿದೆ ಎಂದು ಸಿಪಿಎಂ ಗುರುವಾರ ತಿಳಿಸಿದೆ.

‘ದ ಹಿಂದೂ’ ಪತ್ರಿಕೆಯಲ್ಲಿ ರಫೇಲ್ ಹಗರಣ ಬಯಲಾಗಿರುವುದರಿಂದ ಕಂಗೆಟ್ಟಿರುವ ಸರಕಾರ ಪತ್ರಿಕೆಯನ್ನು ಸರಕಾರಿ ರಹಸ್ಯಗಳ ಕಾಯ್ದೆ ಬಳಸಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ರಫೇಲ್ ಕಡತಗಳು ಕಳವಾಗಿವೆ ಎಂದು ಹೇಳುವ ಮೂಲಕ ಅವುಗಳ ವಿಶ್ವಾಸಾರ್ಹತೆ ಬಗ್ಗೆ ಸರಕಾರವೇ ಒಪ್ಪಿಕೊಂಡಂತಾಗಿದೆ ಎಂದು ಸಿಪಿಎಂ ಟ್ವೀಟ್ ಮಾಡಿದೆ. ರಫೇಲ್ ಯುದ್ಧವಿಮಾನ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ರಫೇಲ್ ಒಪ್ಪಂದದ ದಾಖಲೆಗಳನ್ನು ಸಾರ್ವಜನಿಕ ಜಾಲತಾಣಗಳಲ್ಲಿ ಹಾಕುವ ವ್ಯಕ್ತಿಗಳು ಸರಕಾರಿ ರಹಸ್ಯಗಳ ಕಾಯ್ದೆಯಡಿ ಅಪರಾಧಿಗಳಾಗಿದ್ದಾರೆ ಮತ್ತು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅಟರ್ನಿ ಜನರಲ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News