ಬಿಸಿಲಿನ ಝಳಕ್ಕೆ ಸತ್ತವರನ್ನು ಬಾಲಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರೆಂದರು!

Update: 2019-03-08 10:00 GMT

ಹೊಸದಿಲ್ಲಿ, ಮಾ.8: ಸಾಮೂಹಿಕ ಸಮಾಧಿಗಳು ಹಾಗೂ ಬಿಳಿ ಬಟ್ಟೆಗಳಿಂದ ಮುಚ್ಚಲಾಗಿರುವ ಮೃತದೇಹಗಳ ಛಾಯಾಚಿತ್ರಗಳು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ವಾಯು ದಾಳಿಯ ಪರಿಣಾಮ ಇದೆಂದು ಬಿಂಬಿಸಲಾಗಿದೆ. “ಬಾಲಕೋಟ್ ವಾಯುದಾಳಿಗೆ ಪುರಾವೆ ಕೇಳುತ್ತಿರುವ ಹರಾಮಿ ನೇತಾಗಳಿಗೆ ಇದು ಪುರಾವೆಯಾಗಿದ್ದು ನೀವು ದೇಶಭ್ರಷ್ಟರು ನಿಮ್ಮ ಮುಖಕ್ಕೇ ಚಪ್ಪಲಿಯಲ್ಲಿ ಬಡಿದುಕೊಂಡು ನಿಮ್ಮ ಬಾಯ್ಮುಚ್ಚಿಕೊಂಡು ದೇಶದ ಸೇನಾ ಪಡೆಗಳನ್ನು ಅಪಹಾಸ್ಯ ಮಾಡದೇ ಇರಬೇಕು'' ಎಂದು ಒಂದು ಕಡೆಯಲ್ಲಿ ಬರೆಯಲಾಗಿದ್ದರೆ “ಇದು ಪುರಾವೆ, ನಿಮ್ಮ ಕನ್ನಡಕಗಳನ್ನು ಹಾಕಿ ಸರಿಯಾಗಿ ನೋಡಿ'' ಎಂದು ಇನ್ನೊಂದು ಕಡೆ ಬರೆಯಲಾಗಿದೆ.

ಚಿತ್ರ 1

ಸಾಮೂಹಿಕ ಸಮಾಧಿಗಾಗಿ ತೋಡಲಾಗಿದೆಯೆಂಬಂತೆ ತೋರುವ ಹೊಂಡದಲ್ಲಿ ಕಳೇಬರಗಳನ್ನು ತೋರಿಸುವ ಹಲವು ಛಾಯಾಚಿತ್ರಗಳು.

ಮೂಲ ಚಿತ್ರ ಗೆಟ್ಟಿ ಇಮೇಜಸ್ ನಲ್ಲಿ ಆಲ್ಟ್ ನ್ಯೂಸ್ ಗೆ ಸಿಕ್ಕಿದೆ. “ಕರಾಚಿಯಲ್ಲಿ ಜೂನ್ 26, 2015ರಂದು ಬಿಸಿಲಿನ ಝಳಕ್ಕೆ ಬಲಿಯಾದವರ ಪೈಕಿ ವಾರಿಸುದಾರರಿಲ್ಲದ 50 ಮೃತದೇಹಗಳನ್ನು ಪಾಕಿಸ್ತಾನಿ ಈಧಿ ಚ್ಯಾರಿಟಿ ಸ್ವಯಂಸೇವಕರು ದಫನ ಮಾಡುತ್ತಿರುವುದು'' ಎಂಬ ವಿವರಣೆ ಮೂಲ ಚಿತ್ರಕ್ಕೆ ನೀಡಲಾಗಿದೆ.

ಚಿತ್ರ 2.

ಬಿಳಿ ಬಟ್ಟೆಗಳಿಂದ ಮುಚ್ಚಲ್ಪಟ್ಟ ಹಲವು ಕಳೇಬರಗಳನ್ನು ಕೊಠಡಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚುತ್ತಿರುವುದು ಕಾಣಿಸುತ್ತದೆ.

ಗೂಗಲ್ ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಮೂಲ ಫೋಟೋ ಗೆಟ್ಟಿ ಇಮೇಜಸ್ ನಲ್ಲಿ ಕಂಡು ಬಂತು. 2015ರಲ್ಲಿ ಪಾಕಿಸ್ತಾನದಲ್ಲಿ ಬಿಸಿಲಿನ ಝಳಕ್ಕೆ ನೂರಾರು ಮಂದಿ ಸಾವಿಗೀಡಾಗಿದ್ದ ಸಂದರ್ಭ ತೆಗೆಯಲಾದ ಚಿತ್ರವಿದು. ವಾರಸುದಾರರಿಲ್ಲದ ಈ ಬಿಳಿ ಬಟ್ಟೆಗಳಲ್ಲಿ ಮುಚ್ಚಲಾದ ಕಳೇಬರಗಳಿಗೆ ವ್ಯಕ್ತಿಯೊಬ್ಬ ಐಡೆಂಟಿಫಿಕೇಶನ್ ಪೇಪರ್ಸ್ ಅಂಟಿಸುತ್ತಿದ್ದಾನೆ.

ಚಿತ್ರ 3 ಹಾಗೂ 4

ಬಿಳಿ ಬಟ್ಟೆಯಲ್ಲಿ ಮುಚ್ಚಲ್ಪಟ್ಟ ಕಳೇಬರಗಳ ಎರಡು ಇತರ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬಾಲಕೋಟ್ ವಾಯು ದಾಳಿಯಲ್ಲಿ ಮೃತಪಟ್ಟವರು ಎಂಬಂತೆ ಬಿಂಬಿಸಲಾಗಿದೆ.

ಈ ಚಿತ್ರಗಳೂ ಪಾಕಿಸ್ತಾನದಲ್ಲಿ 2015ರಲ್ಲಿ ಬಿಸಿಲಿನ ಝಳಕ್ಕೆ ಬಲಿಯಾದವರ  ಚಿತ್ರ. ಒಂದು ಚಿತ್ರ ಟೈಮ್ ಮ್ಯಾಗಝಿನ್ ನಲ್ಲಿ ಕಂಡಿದ್ದರೆ ಇನ್ನೊಂದು ಗೆಟ್ಟಿ ಇಮೇಜಸ್ ನಲ್ಲಿತ್ತು.

ಚಿತ್ರ 5

ಕೊನೆಯ ಚಿತ್ರದಲ್ಲಿ ಜನರು ಸತ್ತವರನ್ನು ಹೂಳುತ್ತಿರುವುದು ಕಾಣಿಸುತ್ತದೆ. ಈ ಚಿತ್ರದ ಮೂಲ ತಿಳಿಯುವುದು ಸಾಧ್ಯವಿಲ್ಲವಾದರೂ ಅದು ಅಂತರ್ಜಾಲದಲ್ಲಿ 2016ರಿಂದಿತ್ತು ಎಂದು ತಿಳಿದು ಬರುತ್ತದೆ.

ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ 2013ರಲ್ಲಿ ನ್ಯೂಯಾರ್ಕ್ ಟೈಮ್ಸ್ ಲೇಖನದ ಭಾಗವಾಗಿ ಇಂತಹುದೇ ಚಿತ್ರವಿತ್ತು. ಅಸೋಸಿಯೇಟೆಡ್ ಪ್ರೆಸ್ ಫೋಟೋ ಎಂದು ಲೇಖನದಲ್ಲಿ ಬರೆಯಲಾಗಿತ್ತಲ್ಲದೆ ``ಪಾಕಿಸ್ತಾನದ ಖ್ವೆಟ್ಟಾದಲ್ಲಿ  ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರಿಗೆ ರವಿವಾರ ಫೆಬ್ರವರಿ 17, 2013ರಲ್ಲಿ ಪಾಕಿಸ್ತಾನೀಯರು ಸಾಮೂಹಿಕ ಸಮಾಧಿ ಸಿದ್ಧಪಡಿಸುತ್ತಿದ್ದಾರೆ,'' ಎಂದು ಬರೆಯಲಾಗಿದೆ.

ಈಗ ವೈರಲ್ ಆಗಿರುವ ಚಿತ್ರಕ್ಕೂ ಇದಕ್ಕೂ ಸಾಮ್ಯತೆಯಿದ್ದು, ಎರಡನ್ನೂ ವಿಭಿನ್ನ ಕೋನಗಳಿಂದ ತೆಗೆಯಲಾಗಿದೆ.

Writer - ಪೂಜಾ ಚೌಧುರಿ, altnews.in

contributor

Editor - ಪೂಜಾ ಚೌಧುರಿ, altnews.in

contributor

Similar News