ಉತ್ತರ ಕೊರಿಯ ‘ಸಂಸತ್ತಿ’ಗೆ ಚುನಾವಣೆ: 99.97 ಶೇ. ಮತದಾನ!

Update: 2019-03-12 17:58 GMT

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಮಾ. 12: ಉತ್ತರ ಕೊರಿಯದ ಏಕ ಅಭ್ಯರ್ಥಿ ಚುನಾವಣೆಗಳಲ್ಲಿ ಈ ವರ್ಷ 99.99 ಶೇಕಡ ಮತಗಳು ಚಲಾವಣೆಯಾಗಿವೆ ಎಂದು ಸರಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ 99.97 ಶೇಕಡ ಮತ ಚಲಾವಣೆಯಾಗಿತ್ತು.

ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಎಂಬ ರಬ್ಬರ್ ಸ್ಟಾಂಪ್ ಸಂಸತ್ತನ್ನು ಆಯ್ಕೆ ಮಾಡಲು ಪ್ರತಿ ಐದು ವರ್ಷಗಳಿಗೊಮ್ಮೆ ಉತ್ತರ ಕೊರಿಯನ್ನರು ಮತಗಟ್ಟೆಗಳತ್ತ ತೆರಳುತ್ತಾರೆ.

ಆದರೆ, ಅಲ್ಲಿನ ಮತಪತ್ರದಲ್ಲಿರುವುದು ಕೇವಲ ಓರ್ವ ಅಭ್ಯರ್ಥಿಯ ಹೆಸರು. ಆ ಅಭ್ಯರ್ಥಿ ದೇಶದ ನಾಯಕ ಕಿಮ್ ಜಾಂಗ್ ಉನ್‌ರ ವರ್ಕರ್ಸ್ ಪಾರ್ಟಿಗೆ ಸೇರಿರುತ್ತಾರೆ. ಫಲಿತಾಂಶದ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಮತದಾನದಲ್ಲಿ ಭಾಗವಹಿಸುವುದಷ್ಟೇ ಮುಖ್ಯ.

ವರ್ಕರ್ಸ್ ಪಾರ್ಟಿಯು ದೇಶವನ್ನು ಉಕ್ಕಿನ ಹಿಡಿತದಿಂದ ಆಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News