ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವೆ : ಚಂದ್ರಶೇಖರ್ ಆಝಾದ್
ಹೊಸದಿಲ್ಲಿ , ಮಾ. 13 : ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಮೀರತ್ ನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಝಾದ್ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭೇಟಿ ನೀಡಿದ ಬೆನ್ನಿಗೆ ಆಝಾದ್ ಈ ಘೋಷಣೆ ಮಾಡಿದ್ದಾರೆ.
ನೀವು ಕಾಂಗ್ರೆಸ್ ಗೆ ಬೆಂಬಲ ನೀಡುವಿರಾ ಎಂಬ ಪ್ರಶ್ನೆಗೆ ನಾನು ಬಹುಜನ ಸಮಾಜದ ಆಳ್ವಿಕೆ ಬಯಸುವವನು ಎಂದು ಹೇಳಿದ್ದಾರೆ. ನಿಮಗೆ ಕಾಂಗ್ರೆಸ್ ಬೆಂಬಲ ನೀಡುತ್ತದಾ ಎಂದು ಕೇಳಿದ್ದಕ್ಕೆ ಅದನ್ನು ನೀವು ಪ್ರಿಯಾಂಕಾ ಅವರಲ್ಲೇ ಕೇಳಿ .
ಮೋದಿಜಿ ಅವರನ್ನು ಸುಲಭವಾಗಿ ಗೆಲ್ಲಲು ಬಿಡುವುದಿಲ್ಲ. ಅವರನ್ನು ಸೋಲಿಸ ಬಯಸಿದರೆ ಎಸ್ಪಿ, ಬಿಎಸ್ಪಿ ನನ್ನನ್ನು ಬೆಂಬಲಿಸಲಿ. ಇಲ್ಲವೇ ಮುಲಾಯಂ, ಮಾಯಾವತಿಜೀ ಅವರೇ ಸ್ಪರ್ಧಿಸಲಿ ಎಂದು ಹೇಳಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಮಾರ್ಚ್ 15 ಕ್ಕೆ ದಿಲ್ಲಿಯಲ್ಲಿ ಬೃಹತ್ ರ್ಯಾಲಿ ಆಯೋಜಿಸಿದ್ದೇನೆ ಎಂದವರು ಹೇಳಿದರು.