‘ತಪ್ಪು’ ವೀಸಾಗಳೊಂದಿಗೆ ವಿಮಾನ ಹತ್ತಲು ಪ್ರಯತ್ನಿಸಿದ್ದ 20 ಮಹಿಳೆಯರಿಗೆ ತಡೆ

Update: 2019-03-13 15:41 GMT

ಹೈದರಾಬಾದ್,ಮಾ.13: ಇಲ್ಲಿಯ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ತಪ್ಪು’ ವೀಸಾಗಳೊಂದಿಗೆ ವಿವಿಧ ದೇಶಗಳಿಗೆ ವಿಮಾನಗಳನ್ನು ಹತ್ತಲು ಪ್ರಯತ್ನಿಸಿದ್ದ 20 ಮಹಿಳೆಯರನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಮಹಿಳೆಯರ ಬಳಿ ಉದ್ಯೋಗ ವೀಸಾಗಳಿದ್ದರೂ ಭೇಟಿ ವೀಸಾಗಳನ್ನು ತೋರಿಸಿ ವಲಸೆ ದ್ವಾರದ ಮೂಲಕ ಒಳಪ್ರವೇಶಿಸಲು ಪ್ರಯತ್ನಿಸಿದ್ದರು. ಅವರ ಬಳಿ ಉದ್ಯೋಗ ವೀಸಾಗಳಿದ್ದರಿಂದ ಅವರಿಗೆ ವಲಸೆ ಅನುಮತಿ ದೊರೆಯುತ್ತಿತ್ತು. ಆದರೆ ಅವರು ಭೇಟಿ ವೀಸಾ ತೋರಿಸಿ ಒಳಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ನಿಯಮವು ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಅವರನ್ನು ವಿಚಾರಣೆೆಗೊಳಪಡಿಸಿದ್ದೇವೆ ಎಂದು ಪೊಲೀಸರು ಹೇಳಿದರು.

ನಿಯಮಗಳನ್ವಯ ಕೊಲ್ಲಿ ಸೇರಿದಂತೆ ಕೆಲವು ದೇಶಗಳಿಗೆ ಉದ್ಯೋಗಕ್ಕಾಗಿ ಪ್ರಯಾಣಿಸುವವರು ತಮ್ಮ ಪಾಸ್‌ ಪೋರ್ಟ್ ‌ಗಳಲ್ಲಿ ವಲಸೆ ತಪಾಸಣೆ ಮುದ್ರೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ವಂಚಕರಿಂದ ಜನರ ಶೋಷಣೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News