ಭಾರತದಲ್ಲಿ ಅಮೆರಿಕದ 6 ಪರಮಾಣು ಸ್ಥಾವರಗಳ ನಿರ್ಮಾಣ

Update: 2019-03-14 06:06 GMT

ವಾಷಿಂಗ್ಟನ್,ಮಾ.14: ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಪರಮಾಣು ಇಂಧನ ಮಾರಾಟಕ್ಕೆ ಅಮೆರಿಕ ಒಪ್ಪಿಕೊಂಡಿದ್ದು, ಭಾರತದಲ್ಲಿ 6 ಪರಮಾಣು ಸ್ಥಾವರಗಳನ್ನು ಅಮೆರಿಕ ನಿರ್ಮಿಸಲಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ಭದ್ರತೆ ವಿಭಾಗದ ಕಾರ್ಯದರ್ಶಿ ಆ್ಯಂಡ್ರಿಯಾ ಥಾಂಪ್ಸನ್ ಅವರು ಪರಮಾಣು ಇಂಧನ ಮಾರಾಟ ಮತ್ತು ಭಾರತದಲ್ಲಿ   6 ಪರಮಾಣು ಸ್ಥಾವರ ನಿರ್ಮಾಣದ  ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

 2024ರ ವೇಳೆಗೆ ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಏರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ಭಾರತ ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News