ತೀಸ್ತಾ ಸೆಟಲ್ವಾಡ್ ಪ್ರಕರಣ : ಗುಜರಾತ್ ಹೈಕೋರ್ಟ್ ಆದೇಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

Update: 2019-03-15 13:28 GMT

ಹೊಸದಿಲ್ಲಿ : “ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತವರ ಪತಿ ಜಾವೇದ್ ಆನಂದ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಅದೇ ಸಮಯ ಅವರು ವಿಚಾರಣೆಗೆ ಸಹಕರಿಸದೇ ಇದ್ದರೆ ಅವರನ್ನು ವಶಕ್ಕೆ ಪಡೆದುಕೊಳ್ಳುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಲು ಹೇಗೆ ಸಾಧ್ಯ?,'' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದುಕೊಂಡರೆ ನಿರೀಕ್ಷಣಾ ಜಾಮೀನು ಕೂಡ ರದ್ದಾಗುತ್ತದೆ,'' ಎಂದು ಅವರು  ಹೇಳಿದರು. ಜಸ್ಟಿಸ್ ದೀಪಕ್ ಗುಪ್ತಾ ಹಾಗೂ ಜಸ್ಟಿಸ್ ಸಂಜೀವ್ ಖನ್ನಾ ಅವರಿದ್ದ ಪೀಠ ಮೇಲಿನ ಗುಜರಾತ್ ಹೈಕೋರ್ಟಿನ ಆದೇಶದ ಬಗ್ಗೆ ತನ್ನನ್ನು ತಾನೇ ಹಲವು ಬಾರಿ ಪ್ರಶ್ನಿಸುವಂತಾಗಿತ್ತು.

ಫೆಬ್ರವರಿ 8ರಂದು ಗುಜರಾತ್ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ದಾಖಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ಮೇಲಿನ ಪ್ರಶ್ನೆ ಎದ್ದಿತ್ತು.

ತೀಸ್ತಾ ದಂಪತಿಗಳ ಪರ ವಕೀಲರಾದ ಚಂದರ್ ಉ ದಯ್ ಸಿಂಗ್ ಹಾಗೂ ಹುಝೇಫಾ ಅಹ್ಮದಿ ತಮ್ಮ ಕೋರಿಕೆಯಲ್ಲಿ  ತಮ್ಮ ಕ್ಷಕಿಗಾರರನ್ನು ಪೊಲೀಸ್ ಕಸ್ಟಡಿಗೆ ವಹಿಸುವ  ಕರಿತಾದ ಆದೇಶಕ್ಕೆ ತಡೆ ಹೇರಬೇಕೆಂದು ಕೇಳಿದಾಗ, “ಹಾಗಾದರೆ ನಾವು ನಿರೀಕ್ಷಣಾ ಜಾಮೀನನ್ನೂ ತಡೆ ಹಿಡಿಯುತ್ತೇವೆ,'' ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.

ತೀಸ್ತಾ ಮತ್ತವರ ಪತಿ ವಿರುದ್ಧ ಇತರ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿಯಿರುವುದರಿಂದ ಅವುಗಳೆಲ್ಲವನ್ನೂ ಜತೆಯಾಗಿ ವಿಚಾರಣೆ ನಡೆಸಬಹುದೆಂಬ ಸಲಹೆಯನ್ನು ಗುಜರಾತ್ ಪೊಲೀಸ್ ಪರ ಹಾಜರಿದ್ದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅಹ್ಮದಾಬಾದ್ ನ ಗುಲ್ಬರ್ಗಾ ಸೊಸೈಟಿ ಹಿಂಸಾಚಾರದ  ಸಂತ್ರಸ್ತರಿಗೆಂದು ಸಂಗ್ರಹಿಸಲಾದ ಹಣವನ್ನು ದಂಪತಿ ದುರುಪಯೊಗಪಡಿಸಿದ್ದಾರೆಂಬ ಆರೋಪ ಕುರಿತಾದ ಪ್ರಕಣದ ಜತೆಗೆ ಈ ಪ್ರಕರಣವನ್ನೂ ಸೇರಿಸಿತು.

ತಾವು ಗೋಧ್ರಾ ಘಟನೆಯ ನಂತರದ ಹಿಂಸಾಚಾರದ ಸಂತ್ರಸ್ತರ ಪರ ಹೋರಾಡುತ್ತಿರುವುದರಿಂದ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತೀಸ್ತಾ ದಂಪತಿ ವಾದಿಸುತ್ತಲೇ ಬಂದಿದ್ದಾರೆ.

ತಮ್ಮ ಎನ್‍ಜಿಒ ಸಬ್ ರಂಗ್ ಗೆ 2010-2013 ನಡುವೆ ರೂ 1.4 ಕೋಟಿ ಕೇಂದ್ರ ಸರಕಾರ ನಿಧಿಯನ್ನು ವಂಚನೆಯ ಮೂಲಕ ದಂಪತಿ ಪಡೆದುಕೊಂಡಿದ್ದಾರೆನ್ನಲಾದ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ತನ್ನ ಫೆಬ್ರವರಿ 8ರ ತೀರ್ಪಿನಲ್ಲಿ ದಂಪತಿಗೆ ನಿರೀಕ್ಷಣಾ ಜಾಮೀನಿನ ಜತೆಗೆ ತನಿಖಾಧಿಕಾರಿಗಳಿಗೆ ಅವರನ್ನು ಬಂಧಿಸುವ ಅಧಿಕಾರವನ್ನೂ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News