ಭಾರತೀಯ ಸೇನೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಶಂಕಿತ ಐಎಸ್ ಐ ಏಜೆಂಟ್ ರಾಮ್ ಕುಮಾರ್ ಬಂಧನ

Update: 2019-03-16 06:17 GMT

ಹೊಸದಿಲ್ಲಿ, ಮಾ. 15: ಭಾರತೀಯ ಸೇನೆಯ ಅತಿ ಸೂಕ್ಷ್ಮ ಬೇಹುಗಾರಿಕೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಶಂಕಿತ ಐಎಸ್ ಐ ಏಜೆಂಟ್ ಓರ್ವನನ್ನು ಪೊಲೀಸರು ಜಲಾಂಧರ್‌ನಿಂದ ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಫಝಲಿಕಾದ ನಿವಾಸಿ ರಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಆತನಿಂದ ಎರಡು ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಣಕ್ಕಾಗಿ ಪಾಕಿಸ್ತಾನದಲ್ಲಿರುವ ಐಎಸ್ ಐ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದೇನೆ. ಭಾರತ- ಪಾಕ್ ಗಡಿಯಯಲ್ಲಿರುವ ಭಾರತೀಯ ಸೇನೆಯ ಮಾಹಿತಿ ನೀಡುವಂತೆ ತನಗೆ ಸೂಚಿಸಲಾಗಿತ್ತು ಎಂದು ರಾಮ್ ಕುಮಾರ್ ಹೇಳಿದ್ದಾನೆ. ಜಮ್ಮು ಹಾಗೂ ಕಾಶ್ಮೀರದ ಸೇನಾ ಬೇಹುಗಾರಿಕೆ ಘಟಕದ ಸಮೀಪ ಈತನ ಚಲನವಲನದ ಬಗ್ಗೆ ಮಾಹಿತಿ ಪಡೆದ ರಾಜ್ಯ ವಿಶೇಷ ಕಾರ್ಯಾಚರಣೆ ಪಡೆ ಈತನನ್ನು ವಶಕ್ಕೆ ತೆಗೆದುಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ತಪಾಸಣೆಯ ಬಳಿಕ ಆತನನ್ನು ಮುಂದಿನ ವಿಚಾರಣೆಗಾಗಿ ಚಂಡಿಗಢಕ್ಕೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News