ಲೋಕಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ

Update: 2019-03-19 17:21 GMT

ಹೊಸದಿಲ್ಲಿ, ಮಾ. 18: ಮುಂಬರುವ ಲೋಕಸಭಾ ಚುನಾವಣೆಯ 56 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ಬಿಡುಗಗೊಳಿಸಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶದ 22 ಅಭ್ಯರ್ಥಿಗಳು ಹಾಗೂ ಪಶ್ಚಿಮಬಂಗಾಳದ 11 ಮಂದಿ ಅಭ್ಯರ್ಥಿಗಳು ಸೇರಿದ್ದಾರೆ.

ಸಂಜೆ ಬಿಡುಗಡೆಗೊಳಿಸಲಾದ ಈ ಪಟ್ಟಿ ತೆಲಂಗಾಣದ 8 ಅಭ್ಯರ್ಥಿಗಳು, ಒಡಿಶ್ಶಾದ 6 ಅಭ್ಯರ್ಥಿಗಳು, ಅಸ್ಸಾಂನ 5 ಅಭ್ಯರ್ಥಿಗಳು ಹಾಗೂ ಉತ್ತರಪ್ರದೇಶದ 3 ಅಭ್ಯರ್ಥಿಗಳನ್ನು ಕೂಡ ಒಳಗೊಂಡಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಅವರನ್ನು ಜಂಗಿಪುರದಿಂದ, ಪಿಸಿಸಿಯ ಮಾಜಿ ವರಿಷ್ಠ ಅಧೀರ್ ರಂಜನ್ ಚೌಧುರಿ ಅವರನ್ನು ಬೆಹ್ರಾಮ್‌ಪುರದಿಂದ ಹಾಗೂ ಮಾಜಿ ಸಚಿವ ಪ್ರಿಯಾ ರಂಜನ್ ದಾಸ್‌ಮುನ್ಶಿ ಅವರ ಪತ್ನಿ ದೀಪಾ ದಾಸ್‌ಮುನ್ಶಿ ಅವರನ್ನು ರಾಯ್‌ಗಂಜ್‌ನಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.

ಕೇಂದ್ರದ ಮಾಜಿ ಸಚಿವ ಎಂ.ಎಂ. ಪಲ್ಲಂ ರಾಜು ಅವರನ್ನು ಕಾಕಿನಾಡದಿಂದ, ಪಕ್ಷದ ರಾಜ್ಯಸಭೆಯ ಮಾಜಿ ಸದಸ್ಯ ಜೆ.ಡಿ. ಸೀಲಂ ಅವರನ್ನು ಬಪತ್ಲಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಸಿದೆ. ತನ್ನ ರಾಜ್ಯ ಸಭಾ ಸದಸ್ಯ ಭುಬನೇಶ್ವರ್ ಕಲಿಟಾ ಅವರನ್ನು ಅಸ್ಸಾಂನ ಮಂಗಲ್‌ಡೋಯಿಂದ ಹಾಗೂ ಕೇಂದ್ರದ ಮಾಜಿ ಸಚಿವ ಭಕ್ತ ಚರಣ್ ದಾಸ್ ಅವರನ್ನು ಒಡಿಶ್ಶಾದ ಕಾಲಹಂಡಿಯಿಂದ ಕಣಕ್ಕಿಳಿಸಿದೆ. ರಾಜ್ಯದ ಪಕ್ಷದ ವರಿಷ್ಠ ಉತ್ತಮ್ ಕುಮಾರ್ ರೆಡ್ಡಿ ಅವರನ್ನು ತೆಲಂಗಾಣದ ನಲ್ಗೊಂಡದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬಳಿಕ ಈ ಪಟ್ಟಿ ಪ್ರಕಟಿಸಲಾಗಿದೆ. ಇದುವರೆಗೆ ಒಟ್ಟು 137 ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಒಡಿಶ್ಶಾ ವಿಧಾನ ಸಭೆಯ 36 ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News