68 ಜನರನ್ನು ಕೊಂದವರಾರೆಂದು ಯಾರಿಗೂ ಗೊತ್ತಿಲ್ಲ: ಕಪಿಲ್ ಸಿಬಲ್ ವ್ಯಂಗ್ಯ

Update: 2019-03-21 15:54 GMT

ಹೊಸದಿಲ್ಲಿ,ಮಾ.21: ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಮತ್ತು ಇತರ ಮೂವರನ್ನು ಪಂಚಕುಲಾದ ವಿಶೇಷ ನ್ಯಾಯಾಲಯವು ಬುಧವಾರ ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು,68 ಜನರನ್ನು ಕೊಂದವರು ಯಾರೆಂದು ‘ಯಾರಿಗೂ ಗೊತ್ತಿಲ್ಲ’ ಎಂಬ ತೀರ್ಪಿನೊಂದಿಗೆ ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪಾಲಿಗೆ ’ಹೆಮ್ಮೆಯ ದಿನ’ವಾಗಬೇಕು ಎಂದು ಗುರುವಾರ ವ್ಯಂಗ್ಯವಾಡಿದ್ದಾರೆ.

‘‘ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟದಲ್ಲಿ 68 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಎನ್‌ಐಎ ಎಂಟು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. 68 ಜನರನ್ನು ಕೊಂದವರು ಯಾರೆನ್ನುವುದು ಯಾರಿಗೂ ಗೊತ್ತಿಲ್ಲ ಎನ್ನುವುದು ತೀರ್ಪು. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಗೆ ಹೆಮ್ಮೆಯ ದಿನವಾಗಬೇಕು ’’ಎಂದು ಸಿಬಲ್ ಟ್ವೀಟಿಸಿದ್ದಾರೆ.

2007,ಫೆ.18ರಂದು ಹರ್ಯಾಣದ ಪಾನಿಪತ್ ಬಳಿ ಲಾಹೋರ-ದಿಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿ ಸತ್ತವರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News