ಮಹಾಘಟಬಂಧನ್ : ಬಿಹಾರದಲ್ಲಿ ಕಾಂಗ್ರೆಸ್ 9, ಆರ್ ಜೆಡಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ

Update: 2019-03-22 13:04 GMT

ಪಾಟ್ನಾ, ಮಾ.22: ಬಿಹಾರದಲ್ಲಿ ಆರ್ ಜೆಡಿ , ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ಆರ್ ಜೆಡಿ 20ರಲ್ಲಿ , ಕಾಂಗ್ರೆಸ್  9ರಲ್ಲಿ ಸ್ಪರ್ಧಿಸಲಿವೆ. ಉಳಿದ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ಆರ್ ಎಲ್ ಎಸ್ ಪಿ 5ರಲ್ಲಿ, ವಿಐಪಿ 3ರಲ್ಲಿ ಮತ್ತು ಎಚ್ ಎಎಂ 3 ಕ್ಷೇತ್ರಗಳಲ್ಲಿ ತಮ್ಮ  ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

ಬಿಹಾರದಲ್ಲಿ ಚುನಾವಣೆ ಎದುರಿಸಲು ಐದು ಪಕ್ಷಗಳು ಮಾಡಿಕೊಂಡಿರುವ ಮಹಾಮೈತ್ರಿ ಬಗ್ಗೆ ಆರ್ ಜೆಡಿಯ ರಾಷ್ಟ್ರೀಯ ವಕ್ತಾರ ಮನೋಜ್ ಝಾ ಮತ್ತು ಆರ್ ಜೆಡಿ ರಾಜ್ಯಾಧ್ಯಕ್ಷ ರಾಮ್ ಚಂದ್ರ ಪೂರ್ವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News