ಒಳ್ಳೆಯ ಚಿತ್ರಕ್ಕೆ ಪ್ರಚಾರವೂ ಮುಖ್ಯ ಎಂದ ರಿಷಭ್ ಶೆಟ್ಟಿ

Update: 2019-03-22 16:59 GMT

ಬೆಂಗಳೂರು, ಮಾ.22: ಯಾವುದೇ ಒಳ್ಳೆಯ ಚಿತ್ರ ಮಾಡಿದರೂ  ಪ್ರಚಾರದ  ಕೊರತೆಯಿಂದ ಜನರಿಗೆ ತಲುಪುವುದಿಲ್ಲ ಎಂದು  ಬೆಲ್‌ಬಾಟಂ ಖ್ಯಾತಿಯ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರು 'ಲಂಡನ್‌ನಲ್ಲಿ ಲಂಬೋದರ’ ಸಿನಿಮಾದ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 

“ಪಬ್ಲಿಸಿಟಿ ವಿಷಯದಲ್ಲಿ ನಾವು ಹಿಂದೆ ಇದ್ದೇವೆ. ಜನರು ವಿಷಯ ತಿಳಿದು ಟಾಕೀಸ್‌ಗೆ ಬರುವುದರೊಳಗೆ ಚಿತ್ರ ಇರುವುದಿಲ್ಲ.  ಆದುದರಿಂದ ಈಗಿನಿಂದಲೇ ಗರಿಷ್ಟ ಸಿನಿಮಾದ ಸುದ್ದಿಯು ಜನರಿಗೆ ತಿಳಿಯುವಂತೆ ಮಾಡಬೇಕು. ಶೀರ್ಷಿಕೆ ಹೆಸರು ಕೇಳಿದರೆ ವಿದೇಶಗಳಲ್ಲಿ ಸುಲಭವಾಗಿ ಪ್ರದರ್ಶನಕ್ಕೆ ಥಿಯೇಟರ್ ಸಿಗಲಿದೆ. ಚಿತ್ರತಂಡದಲ್ಲಿ ಅಲ್ಲಿನವರೇ ಇರುವುದರಿಂದ ಕಷ್ಟದ ಕೆಲಸವಲ್ಲ.  ಲಂಡನ್‌ ನ ಇಪ್ಪತ್ತು ಕನ್ನಡಿಗರು ಸೇರಿಕೊಂಡು ನಿರ್ಮಾಣ ಮಾಡಿರುವುದರಿಂದ ಕ್ರೌಡ್ ಫಂಡಿಂಗ್ ಸಿನಿಮಾ ಎನ್ನಲು ಕೂಡ ಆಗುವುದಿಲ್ಲ.  ಥ್ರಿಲ್ಲರ್ ಅಂಶಗಳು ಇರಲಿದ್ದು, ಚಿತ್ರದ ನಾಯಕ  ಲಂಬೋದರನಿಗೆ ಏನೇನು ವಿಘ್ನಗಳು ಬರುತ್ತವೆಂದು  ಟ್ರೇಲರ್ ಮೂಲಕವೇ ತೋರಿಸಿದ್ದಾರೆ. ಒಳ್ಳೆಯದಾಗಲಿ ಎಂದು ಹಾರೈಸಿದರು.

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಟಿ ಸುಮನ್ ನಗರ್ಕರ್ ಕೂಡ ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಆಡಿಯೋ ಬಿಡುಗಡೆಯಲ್ಲಿ ತಾರೆಯರ ಮಾತು

"ನಾನೊಬ್ಬ ಹೂರತುಪಡಿಸಿ ಚಿತ್ರ ತಂನಡಲ್ಲಿ ಉಳಿದವರೆಲ್ಲರೂ ಹಿರಿಯರು. ಇವರಿಂದ  ಸೆಟ್‌ ನಲ್ಲಿ ಸಾಕಷ್ಟು ಕಲಿಯಲು ಅವಕಾಶ ಸಿಕ್ಕಿತ್ತು.  ಸಾಮಾನ್ಯ ಮನುಷ್ಯನೊಬ್ಬ ಲಂಡನ್‌ಗೆ ಹೋಗುವುದು.  ಅಲ್ಲಿನ ಸವಾಲುಗಳಿಗೆ  ಹೊಂದಿ ಕೊಳ್ಳುವಾಗ ಬರುವ ಪರಿಪಾಟಲುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.  ರಿಶಬ್ ಸರ್ ಚಿತ್ರ ಕಿರಿಕ್ ಪಾರ್ಟಿಯ  ಪ್ರೇರಣೆಯಿಂದಲೇ ಪೋಸ್ಟರ್ ಡಿಸೈನ್ ಮಾಡಿಸಿದ್ದು ಎಂದು ನಾಯಕ ಸಂತೋಷ್ ಹೇಳಿದರು.

ನಾಯಕಿ ಬುದ್ದಿವಂತಿಕೆಯ ಹುಡುಗಿಯಾಗಿದ್ದು, ಕನ್ನಡ ಭಾಷೆಯನ್ನು ಇಷ್ಟಪಡುವ, ಕರ್ನಾಟಕದ ಹೆಮ್ಮೆಯನ್ನು ಸಾರುವ ಪಾತ್ರದಲ್ಲಿದ್ದೇನೆಂದು ನಾಯಕಿ ಶ್ರುತಿಪ್ರಕಾಶ್ ತಮ್ಮ ಪಾತ್ರವನ್ನು ಪರಿಚಯಿಸಿಕೊಂಡರು. ನಿರ್ದೇಶಕ ರಾಜ್‌ ಸೂರ್ಯ, ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಪ್ರಣವ್, ಗಾಯಕ ವಾಸುಕಿ ವೈಭವ್ ಮುಂತಾದವರು ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು.  ಇದಕ್ಕೂ ಮುನ್ನ ಚಿತ್ರದ ಎರಡು ಹಾಡುಗಳು ಮತ್ತು ಟ್ರೈಲರ್ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿತು. ಮಾರ್ಚ್ 29ರಂದು  ಲಂಡನ್ ಸುಂದರ ತಾಣಗಳನ್ನು ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News