17 ತಿಂಗಳಲ್ಲಿ 76.48 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್‌ಒ ವರದಿ

Update: 2019-03-22 17:28 GMT

ಹೊಸದಿಲ್ಲಿ, ಮಾ.22: ಕಳೆದ ಹದಿನೇಳು ತಿಂಗಳಲ್ಲಿ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ 76.48 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಇಪಿಎಫ್‌ಒ ವರದಿ ತಿಳಿಸಿದೆ. ಸೆಪ್ಟಂಬರ್ 2017ರಿಂದ ಜನವರಿ 2019ರ ಅವಧಿಯಲ್ಲಿ 76.48 ಲಕ್ಷ ಹೊಸ ಚಂದಾದಾರರು ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌ಒ) ಯ ಸಾಮಾಜಿಕ ಭದ್ರತಾ ಯೋಜನೆಗೆ ಸೇರಿದ್ದಾರೆ ಎಂದು ಇಪಿಎಫ್‌ಒ ದತ್ತಾಂಶ ವರದಿ ತಿಳಿಸಿದೆ.

ಜನವರಿಯಲ್ಲಿ ಅತೀಹೆಚ್ಚು 8.96 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಸೆಪ್ಟೆಂಬರ್ 2017ರಲ್ಲಿ ಈ ಸಂಖ್ಯೆ 2,75,609 ಅಗಿತ್ತು ಎಂದು ವರದಿ ತಿಳಿಸಿದೆ. ಜನವರಿಯಲ್ಲಿ 8,96,516 ಮಂದಿ ಕಾರ್ಮಿಕ ಭವಿಷ್ಯ ನಿಧಿಗೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

2018ರ ಮಾರ್ಚ್‌ನಲ್ಲಿ 29,023 ಸದಸ್ಯರು ಭವಿಷ್ಯ ನಿಧಿ ಯೋಜನೆಯಿಂದ ಹೊರಹೋಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News