‘ಪಿಎಂ ನರೇಂದ್ರ ಮೋದಿ’ ಚಿತ್ರಕ್ಕೆ ನಾನು ಹಾಡು ಬರೆದೇ ಇಲ್ಲ: ಜಾವೇದ್ ಅಖ್ತರ್ ನಂತರ ಸಮೀರ್ ಹೇಳಿಕೆ

Update: 2019-03-23 11:27 GMT

ಹೊಸದಿಲ್ಲಿ, ಮಾ.23: ಪ್ರಧಾನಿ ನರೇಂದ್ರ ಮೋದಿಯ ಜೀವನಾಧರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಇದೀಗ ಖ್ಯಾತ  ಗೀತರಚನಕಾರರಿಂದ ಟೀಕೆಗೊಳಗಾಗಿದೆ. ಬಿಡುಗಡೆಗೊಳ್ಳುವ ಮುನ್ನವೇ ಸಾಕಷ್ಟು ವಿವಾದಕ್ಕೀಡಾಗಿರುವ ಈ ಚಲನಚಿತ್ರದ ವಿರುದ್ಧ ಗೀತೆ ರಚನೆಕಾರ ಜಾವೇದ್ ಅಖ್ತರ್ ಕಿಡಿಕಾರಿದ್ದಾರೆ. ಚಿತ್ರದ ಪೋಸ್ಟರ್ ಗಳಲ್ಲಿ ತನ್ನ ಹೆಸರು ಕಂಡು ಅಖ್ತರ್ ಆಘಾತ ವ್ಯಕ್ತಪಡಿಸಿದ್ದರೆ, ಇದೀಗ ಸಮೀರ್ ಅಂಜಾನ್ ಕೂಡ ತಮ್ಮ ಹೆಸರು ಕಂಡು ಆಶ್ಚರ್ಯವಾಗಿದೆ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಯಾವುದೇ ಹಾಡು ರಚಿಸಿಲ್ಲ ಎಂದು ಇದೀಗ ಸಮೀರ್ ಅಂಜಾನ್ ಹೇಳಿದ್ದಾರೆ.

“ನನ್ನ ಹೆಸರು ಪಿಎಂ ನರೇಂದ್ರ ಮೋದಿ ಪೋಸ್ಟರ್ ನಲ್ಲಿ ನೋಡಿ ಅಚ್ಚರಿಯಾಯಿತು. ಇಂತಹ ಒಂದು ಚಿತ್ರಕ್ಕೆ ಯಾವುದೇ ಹಾಡನ್ನು ನಾನು ರಚಿಸಿಲ್ಲ'' ಎಂದು ಅವರು ಬರೆದಿದ್ದಾರೆ.

ಶುಕ್ರವಾರ ತಮ್ಮ ಹೆಸರನ್ನು ಪೋಸ್ಟರ್ ಗಳಲ್ಲಿ ನೋಡಿ ಜಾವೇದ್ ಅಖ್ತರ್ ಕೂಡ ಇದೇ ರೀತಿ ಆಘಾತಗೊಂಡು ಟ್ವೀಟ್ ಮಾಡಿದ್ದರು.

ವಿವೇಕ್ ಒಬೆರಾಯ್ ಪ್ರಧಾನಿ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಊಮಂಗ್ ಕುಮಾರ್ ನಿರ್ದೇಶನದ ಈ ಚಲನಚಿತ್ರವನ್ನು ಲೋಕಸಭಾ ಚುನಾವಣೆ ಮುಗಿಯುವ ತನಕ ಮುಂದೂಡಬೇಕೆಂದು ಶುಕ್ರವಾರ ಡಿಎಂಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News